ಊರು ತ್ಯಜಿಸುವಂತೆ ಕ್ರಿಶ್ಚಿಯನ್ ದಂಪತಿಗೆ ಠಾಕೂರ್ ಸಮುದಾಯ ಬಲವಂತ

Update: 2019-07-25 17:56 GMT

ಲಕ್ನೋ, ಜು. 25: ಕ್ರಿಶ್ಚಿಯನ್ ದಂಪತಿಗೆ ನೆರೆಯ ಠಾಕೂರ್ ಸಮುದಾಯದವರು ಥಳಿಸಿ ಊರು ಬಿಟ್ಟು ತೆರಳುವಂತೆ ಬಲವಂತಪಡಿಸಿದ ಘಟನೆ ಸೋಮವಾರ ಲಕ್ನೋದಲ್ಲಿ ನಡೆದಿದೆ.

ಠಾಕೂರ್ ಸಮುದಾಯಕ್ಕೆ ಸೇರಿದವರೇ ಬಹುಸಂಖ್ಯಾತರಾಗಿರುವ ಚಿನಾತ್ ಪ್ರದೇಶದ ನಂದಿ ವಿಹಾರದಲ್ಲಿ ಕ್ರಿಶ್ಚಿಯನ್ ದಂಪತಿ ವಾಸಿಸುತ್ತಿದ್ದರು. ಅವರಿಗೆ ಠಾಕೂರ್ ಸಮುದಾಯಕ್ಕೆ ಸೇರಿದವರು ಬಹಳ ಹಿಂದಿನಿಂದಲೇ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. “

ಈ ಪ್ರದೇಶದಲ್ಲಿ ನಮ್ಮದು ಮಾತ್ರ ಅಲ್ಪಸಂಖ್ಯಾತರ ಕುಟುಂಬ. ಆದುದರಿಂದ ಅವರು ನಮಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಸೋಮವಾರ ಠಾಕೂರ್ ಸಮುದಾಯದ ಹಾಗೂ ನಮ್ಮ ಕುಟಂಬದ ಮಕ್ಕಳ ನಡುವೆ ಜಗಳ ನಡೆದ ಬಳಿಕ ಅವರ ಕಿರುಕುಳ ತೀವ್ರಗೊಂಡಿದೆ” ಎಂದು ದಂಪತಿ ಆರೋಪಿಸಿದ್ದಾರೆ. ಇಂದು ಠಾಕೂರ್ ಸಮುದಾಯ ಈ ಕ್ರಿಶ್ಚಿಯನ್ ಕುಟುಂಬಕ್ಕೆ ಹಲವು ಗಂಟೆಗಳ ಕಾಲ ಕಿರುಕುಳ ನೀಡಿದೆ ಊರು ಬಿಟ್ಟು ತೆರಳುವಂತೆ ಬಲವಂತಪಡಿಸಿದೆ ಎಂದು ವರದಿಯಾಗಿದೆ.

ಎರಡು ಕಡೆಯವರ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಧಾನ ಆರೋಪಿ ಶುಭಮ್‌ನನ್ನು ಬಂಧಿಸಲಾಗಿದೆ ಎಂದು ಗೋಮತಿ ನಗರದ ಸರ್ಕಲ್ ಅಧಿಕಾರಿ ಅವನೀಶ್ವರ್ ಚಂದ್ರ ಶ್ರೀವಾತ್ಸವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News