ಪುಂಜಾಲಕಟ್ಟೆ: ಜೂಜಾಟ ಅಡ್ಡೆಯ ಮೇಲೆ ಪೊಲೀಸರ ದಾಳಿ; ಏಳು ಮಂದಿ ಸೆರೆ

Update: 2019-07-26 12:33 GMT

ಬಂಟ್ವಾಳ, ಜು. 26: ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂ. ಸೊತ್ತುಗಳ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಇಲ್ಲಿನ ನಿವಾಸಿಗಳಾದ ದಿಲೀಪ್, ಹರೀಶ್, ಇಕ್ಬಾಲ್, ಲತೀಫ್, ಶೇಖರ್, ಸತೀಶ್, ಶೇಖರ ಆಚಾರಿ ಬಂಧಿತ ಆರೋಪಿಗಳು. ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಠಾಣಾ ಪೊಲೀಸರು ಈ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ  1,320 ರೂ., ಬೈಕ್ 2 ಹಾಗೂ ಆಟೋ ರಿಕ್ಷಾ ಹಾಗೂ ಇತರ ಸೊತ್ತಗಳ ಸಹಿತ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿದ ಸೊತ್ತುಗಳ ಮೌಲ್ಯ 1,53,370 ರೂ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್ಸೈ ಸೌಮ್ಯ ಜೆ., ಎಎಸ್ಸೈ ಮತ್ತು ಸಾಬು ಮಿರ್ಜಿ, ಹರೀಶ್, ಸಿಬ್ಬಂದಿ ನಾರಾಯಣ ಪಾಲ್ಗೊಂಡಿದ್ದರು. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News