×
Ad

ಎನ್‌ಆರ್‌ಐಗಳಿಗೆ ಪೋಸ್ಟಲ್, ಇ-ಬ್ಯಾಲೆಟ್ ಮತದಾನ: ಪಿಐಲ್ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2019-07-26 23:36 IST

ಹೊಸದಿಲ್ಲಿ, ಜು. 26: ಭಾರತದಲ್ಲಿ ಚುನಾವಣೆ ಸಂದರ್ಭ ಅನಿವಾಸಿ ಭಾರತೀಯರು ಪೋಸ್ಟಲ್ ಅಥವಾ ಇ-ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮೂರು ತಿಂಗಳು ಕಾಲ ಮುಂದೂಡಿದೆ.

ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಅನಿವಾಸಿ ಭಾರತೀಯರಿಗೆ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಗೆ ಅಂಗೀಕಾರ ದೊರಕುವ ಸಾಧ್ಯತೆ ಇದೆ. ಆದುದರಿಂದ ಮನವಿಯ ವಿಚಾರಣೆ ಮುಂದೂಡುವಂತೆ ದೂರುದಾರರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಕೋರಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ ವಿಚಾರಣೆ ಮುಂದೂಡಿತು. ಲಂಡನ್ ಮೂಲದ ಪ್ರವಾಸಿ ಭಾರತ್ ಸಂಘಟನೆ ಅಧ್ಯಕ್ಷ ನಾಗೇಂದರ್ ಚಿಂದಮ್ ಹಾಗೂ ಶಂಶೀರ್ ವಿ.ಪಿ. ಸಹಿತ ಇತರ ಅನಿವಾಸಿ ಭಾರತೀಯರು ಸಲ್ಲಿಸಿದ ಮನವಿಯ ಗುಚ್ಚವನ್ನು ಪೀಠ ವಿಚಾರಣೆ ನಡೆಸಿತು. 20 ಏಶ್ಯಾ ದೇಶಗಳ ಸಹಿತ 114 ದೇಶಗಳಲ್ಲಿ ಬಾಹ್ಯ ಮತದಾನಕ್ಕೆ ಅವಕಾಶ ಇದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News