ಕೇರಳಕ್ಕೆ 113 ಕೋ. ರೂ. ಶುಲ್ಕ ವಿಧಿಸಿದ ಐಎಎಫ್: ವಿನಾಯತಿ ಕೋರಿದ ಪಿಣರಾಯಿ ವಿಜಯನ್

Update: 2019-07-26 18:23 GMT

ತಿರುವನಂತಪುರ, ಜು. 26: ಕೇರಳದಲ್ಲಿ 2018ರಲ್ಲಿ ಸಂಭವಿಸಿದ ಮಹಾ ನೆರೆಯ ಸಂದರ್ಭ ಭಾರತೀಯ ವಾಯು ಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಶುಲ್ಕ 113 ಕೋಟಿ ರೂಪಾಯಿ ಪಾವತಿಸುವುದರಿಂದ ವಿನಾಯತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಜುಲೈ 25ರ ಪತ್ರದಲ್ಲಿ ಪಿಣರಾಯಿ ವಿಜಯನ್, 113.69 ಕೋಟಿ ರೂಪಾಯಿ ಶುಲ್ಕ ಪಾವತಿಸುವಂತೆ ಭಾರತೀಯ ವಾಯು ಪಡೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಆದರೆ, ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದಿದ್ದಾರೆ. ಮೂಲಭೂತ ಸೌಕರ್ಯ ಹಾಗೂ ಇತರ ಹಾನಿ ಸರಿಪಡಿಸಲು 31,000 ಕೋಟಿ ರೂಪಾಯಿ ಅಗತ್ಯ ಇದೆ ಎಂದು ವಿಶ್ವಸಂಸ್ಥೆ ಸಿದ್ದಪಡಿಸಿದ ವಿಕೋಪೋತ್ತರ ಅಗತ್ಯಗಳ ಅಂದಾಜು (ಪಿಡಿಎನ್‌ಎ) ವರದಿ ಹೇಳಿದೆ. ಆದುದರಿಂದ ಶುಲ್ಕ ಪಾವತಿ ಕಷ್ಟಕರ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ‘‘ವಿಪತ್ತು ಪರಿಹಾರ ನಿಧಿಯಿಂದ ಇಷ್ಟೊಂದು ದೊಡ್ಡ ಮೊತ್ತದ ಶುಲ್ಕವನ್ನು ವಾಯು ಪಡೆಗೆ ನೀಡಲು ಕಷ್ಟಕರ. ಆದುದರಿಂದ ಕೇರಳದ ಪ್ರಸಕ್ತ ಪರಿಸ್ಥಿತಿ ಪರಿಗಣಿಸಿ ವಾಯು ಪಡೆಗೆ 113.69 ಕೋಟಿ ರೂಪಾಯಿ ಪಾವತಿಸುವುದರಿಂದ ವಿನಾಯತಿ ನೀಡಬೇಕು’’ ಎಂದು ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News