ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಮೂವರು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗುಂಪು
Update: 2019-07-27 15:11 IST
ಭೋಪಾಲ್, ಜು.27: ಮಕ್ಕಳ ಕಳ್ಳರೆಂದು ತಪ್ಪಾಗಿ ಭ್ರಮಿಸಿ ಮೂವರು ಕಾಂಗ್ರೆಸ್ ನಾಯಕರನ್ನು ಗುಂಪೊಂದು ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.
ಗ್ಯಾಂಗ್‌ವೊಂದು ಮಕ್ಕಳನ್ನು ಅಪಹರಿಸಲು ಬಂದಿದೆ ಎಂಬ ಊಹಾಪೋಹ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಿದ್ದಿರುವ ಮರಗಳನ್ನು ಪ್ರಮುಖ ರಸ್ತೆಗೆ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳೀಯ ಕಾಂಗ್ರೆಸ್ ನಾಯಕರಾದ ಧಮೇಂದ್ರ ಶುಕ್ಲಾ, ಧರ್ಮು ಸಿಂಗ್ ಹಾಗೂ ಲಲಿತ್ ಬರಾಸ್ಕರ್‌ರನ್ನು ಹಿಂಬಾಲಿಸಿದ ಗ್ರಾಮಸ್ಥರು ಅವರನ್ನು ಸುತ್ತುವರಿದು ವಾಹನಕ್ಕೆ ಹಾನಿಗೊಳಿಸಿದರು. ಅವರನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.