ಒಪ್ಪಂದ ರಹಿತ ಬ್ರೆಕ್ಸಿಟ್‌ನಿಂದ ಏಕೀಕೃತ ಐರ್‌ಲ್ಯಾಂಡ್: ಐರ್‌ಲ್ಯಾಂಡ್ ಪ್ರಧಾನಿ ಎಚ್ಚರಿಕೆ

Update: 2019-07-27 15:37 GMT

 ಲಂಡನ್, ಜು. 27: ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದರೆ (ಬ್ರೆಕ್ಸಿಟ್), ನಾರ್ದರ್ನ್ ಐರ್‌ಲ್ಯಾಂಡ್‌ನ ಹೆಚ್ಚಿನ ಜನರು ಬ್ರಿಟನ್ ಜೊತೆಗಿನ ತಮ್ಮ ಬಂಧವನ್ನು ಪ್ರಶ್ನಿಸುತ್ತಾರೆ ಹಾಗೂ ಇದು ಏಕೀಕೃತ ಐರ್‌ಲ್ಯಾಂಡ್‌ಗೆ ಕಾರಣವಾಗುತ್ತದೆ ಎಂದು ಐರ್‌ಲ್ಯಾಂಡ್ ಪ್ರಧಾನಿ ಲಿಯೊ ವರಾದ್ಕರ್ ಹೇಳಿದ್ದಾರೆ.

ಈಗಿನ ಬ್ರೆಕ್ಸಿಟ್ ಒಪ್ಪಂದ ಸ್ವೀಕಾರಾರ್ಹವಲ್ಲ ಹಾಗೂ ಒಪ್ಪಂದವಿಲ್ಲದೆಯೇ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಬ್ರಿಟನ್‌ನ ‘ಉನ್ನತ ಆದ್ಯತೆ’ಯಾಗಿದೆ ಎಂಬುದಾಗಿ ನೂತನ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ ಬಳಿಕ ಐರ್‌ಲ್ಯಾಂಡ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಒಪ್ಪಂದ ರಹಿತ ಬ್ರೆಕ್ಸಿಟ್ ಜಾರಿಯಾದರೆ, ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್ ಜೊತೆಗಿನ ತಮ್ಮ ಬಂಧವನ್ನು ನಾರ್ತ್ ಐರ್‌ಲ್ಯಾಂಡ್‌ನ ಹೆಚ್ಚೆಚ್ಚು ಜನರು ಪ್ರಶ್ನಿಸಬಹುದು ಎಂದು ವರಾದ್ಕರ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News