ಆರೆಸ್ಸೆಸ್ ಅಂಗ ಸಂಸ್ಥೆ ಬಿಎಸ್‌ಎಂನಿಂದ ನೂತನ ವಿಶ್ವವಿದ್ಯಾನಿಲಯ ಶ್ರೇಣಿ ವ್ಯವಸ್ಥೆ ರಚನೆ

Update: 2019-07-27 17:24 GMT
ಸಾಂದರ್ಭಿಕ ಚಿತ್ರ: PTI

ಹೊಸದಿಲ್ಲಿ, ಜು. 27: ಆರೆಸ್ಸೆಸ್ ನ ಅಂಗ ಸಂಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಎಸ್‌ಎಂ (ಭಾರತೀಯ ಶಿಕ್ಷಣ್ ಮಂಡಲ್) ವಿಶ್ವವಿದ್ಯಾನಿಲಯಗಳಿಗೆ ಗುರು (ಗ್ಲೋಬಲ್ ಯುನಿವರ್ಸಿಟಿ ರ್ಯಾಂಕಿಂಗ್ ಯುಟಿಲಿಟಿ) ಎಂದು ಕರೆಯಲಾಗುವ ನೂತನ ಶ್ರೇಣಿ ವ್ಯವಸ್ಥೆಯನ್ನು ರೂಪಿಸಲು ಆರಂಭಿಸಿದೆ. ಬಿಎಸ್‌ಎಂ ಈ ವ್ಯವಸ್ಥೆಯನ್ನು ಆರಂಭದಲ್ಲಿ ಪ್ರಯೋಗಾರ್ಥವಾಗಿ ಪರಿಶೀಲನೆ ನಡೆಸಲಿದೆ. 2020 ಎಪ್ರಿಲ್‌ನಲ್ಲಿ ಔಪಚಾರಿಕವಾಗಿ ಲೋಕಾರ್ಪಣೆಗೊಳಿಸಲಿದೆ. ‘ಭಾರತೀಯ ಸಂಯೋಜಿತ ದೃಷ್ಟಿಕೋನ’ದಲ್ಲಿ ಇರುವ ಸಾಮಾಜಿಕವಾಗಿ ಪ್ರಸ್ತುತವಾಗಿರುವ ಸಂಶೋಧನಾ ಚಿಂತನೆಗಳಿಗೆ ವೇದಿಕೆ ಸೃಷ್ಟಿಸುತ್ತಿರುವ ಬಿಎಸ್‌ಎಂ 2016ರಲ್ಲಿ ಆರಂಭಿಸಿದ ಸಂಶೋಧನಾ ಉಪಕ್ರಮವಾದ ‘ರಿಸರ್ಚ್ ಫಾರ್ ರಿಸರ್ಜೆನ್ಸ್ ಫೌಂಡೇಶನ್’ ಆಶ್ರಯದಲ್ಲಿ ಈ ಶ್ರೇಣಿ ಉಪಕ್ರಮಗಳನ್ನು ರೂಪಿಸಲಿದೆ.

‘ರಿಸರ್ಚ್ ಫಾರ್ ರಿಸರ್ಜೆಸ್ ಫೌಂಡೇಶನ್’ನೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ ವಿಶ್ವವಿದ್ಯಾನಿಲಯಗಳಲ್ಲಿ ಮೊದಲು ಇದರ ಪ್ರಾಯೋಗಿಕ ಪರಿಶೀಲನೆ ನಡೆಸಲಾಗುವುದು.

  ಭಾರತೀಯ ಉನ್ನತ ಶಿಕ್ಷಣದಲ್ಲಿ ಸಂಶೋಧನೆ, ಗೌರವ ಹಾಗೂ ಬೋಧನೆ ಸಂಬಂಧಿಸಿದ ಗುರುತಿನ ವ್ಯಾಪ್ತಿಯನ್ನು ಆಧಾರವಾಗಿರಿಸಿ ಸಂಸ್ಥೆಗಳ ಗುಣಮಟ್ಟ ಅಳೆಯಲು ಹಾಗೂ ಹೋಲಿಸಲು ವಿಶ್ವವಿದ್ಯಾನಿಲಯ ಶ್ರೇಣಿಯನ್ನು ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News