ರಾ ಅಧಿಕಾರಿ ಜೋಹ್ರಿ ಬಿಎಸ್‌ಎಫ್‌ನ ನೂತನ ಡಿಜಿ ಆಗಿ ನಿಯೋಜನೆ
Update: 2019-07-28 23:13 IST
ಹೊಸದಿಲ್ಲಿ, ಜು. 28: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನ ನೂತನ ಪ್ರಧಾನ ನಿರ್ದೇಶಕ (ಡಿಜಿ)ರಾಗಿ ರಾ ಅಧಿಕಾರಿ ವಿ.ಕೆ. ಜೋಹ್ರಿ ನಿಯೋಜಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯಸ್ಥರಾಗಿರುವ ಹಾಗೂ ಕೇಂದ್ರ ಗೃಹ ಸಚಿವ ಸದಸ್ಯರಾಗಿರುವ ಸಂಪುಟದ ನೇಮಕ ಸಮಿತಿ (ಎಸಿಸಿ) ಈ ಆದೇಶ ನೀಡಿದೆ. 1984ನೇ ಬ್ಯಾಚ್‌ನ ಮಧ್ಯಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ಜೋಹ್ರಿ ಪ್ರಸ್ತುತ ಬಾಹ್ಯಾ ಬೇಹುಗಾರಿಕೆ ಸಂಸ್ಥೆ ರಾ (ಆರ್‌ಎಡಬ್ಲು)ದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭದ್ರತಾ ಪಡೆಯ ಡಿಜಿ ರಜನಿ ಕಾಂತಿ ಮಿಶ್ರಾ ಆಗಸ್ಟ್ 31ರಂದು ನಿವೃತ್ತರಾದ ಬಳಿಕ ಜೊಹ್ರಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಕೇಂದ್ರ ಗೃಹ ಸಚಿವಾಲಯದಲ್ಲಿ ಕೂಡಲೇ ಅನುಷ್ಠಾನಕ್ಕೆ ಬರುವಂತೆ ಜೋಹ್ರಿ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನಿಯೋಜಿಸಿದೆ ಎಂದು ಆದೇಶ ಹೇಳಿದೆ.