ಠಾಣೆಗೆ ತಾಲಿಬಾನ್ ದಾಳಿ: ನಾಲ್ವರು ಪೊಲೀಸರ ಹತ್ಯೆ

Update: 2019-07-28 17:51 GMT

ಕಾಬೂಲ್, ಜು.28: ಅಫ್ಘಾನಿಸ್ತಾನದ ಪೂರ್ವ ಘಜನಿ ಪ್ರಾಂತದಲ್ಲಿ  ತಾಲಿಬಾನ್‌ನ ಅತ್ಮಹತ್ಯಾ ಬಾಂಬರ್ ಒಬ್ಬಾತ ರವಿವಾರ ಮುಂಜಾನೆ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ಹತ್ಯೆಗೈದಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಪಡೆಯ ವಕ್ತಾರ ಅಹ್ಮದ್ ಖಾನ್ ಸೇರತ್ ತಿಳಿಸಿದ್ದಾರೆ. ದಾಳಿಯಲ್ಲಿ ಇತರ 10 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.

ಘಜನಿಯ ಇನ್ನೊಂದೆಡೆ ರಸ್ತೆ ಬದಿಯಲ್ಲಿ ಬಾಂಬೊಂದು ಸ್ಪೋಟಿಸಿದ್ದರಿಂದ ಮೂವರು ನಾಗರಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಯಾರೂ ಕೂಡಾ ವಹಿಸಿಕೊಂಡಿಲ್ಲವೆಂದ ಸೇರತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News