‘ಡಿಸ್ಕವರಿ’ ಚಾನೆಲ್ ನ ‘ಮ್ಯಾನ್ ವರ್ಸಸ್ ವೈಲ್ಡ್’ ಶೋನಲ್ಲಿ ಪ್ರಧಾನಿ ಮೋದಿ

Update: 2019-07-29 08:32 GMT

ಹೊಸದಿಲ್ಲಿ, ಜು.29: ಆಗಸ್ಟ್ 12ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ‘ಡಿಸ್ಕವರಿ ಇಂಡಿಯಾ’ ಚಾನೆಲ್ ನ ಜನಪ್ರಿಯ ಶೋ `ಮ್ಯಾನ್ ವರ್ಸಸ್ ವೈಲ್ಡ್'ನಲ್ಲಿ ಬ್ರಿಟಿಷ್ ನಿರೂಪಕ ಬೇರ್ ಗ್ರಿಲ್ಸ್ ಜತೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಪ್ರಾಣಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತಿಳಿಯದ ಹಲವಾರು ವಿಚಾರಗಳು ಈ ಕಾರ್ಯಕ್ರಮದಲ್ಲಿ ಎಲ್ಲರೂ ನೋಡಬಹುದು ಎಂದು ಗ್ರಿಲ್ಸ್ ಹೇಳಿದ್ದು, ಕುರಿತಂತೆ ಟ್ವೀಟ್ ಮಾಡಿದ್ದಾರೆ.

``ಭಾರತದ ಸಮೃದ್ಧಿ ಪರಿಸರ  ಪರಂಪರೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ಈ ಕಾರ್ಯಕ್ರಮ ಪರಿಚಯಿಸಲಿದೆ'' ಎಂದು ಡಿಸ್ಕವರಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News