×
Ad

ಹಣದ ವಿವಾದ: ದಲಿತ ವ್ಯಾಪಾರಿಯ ಥಳಿಸಿ ಹತ್ಯೆ

Update: 2019-07-29 19:42 IST

ಬಲಿಯಾ,ಜು.29: ಹಣದ ವಿವಾದದಲ್ಲಿ ಗ್ರಾಹಕನೋರ್ವ ತನ್ನ ಸಹಚರರೊಂದಿಗೆ ಸೇರಿಕೊಂಡು ದಲಿತ ವ್ಯಾಪಾರಿಯೋರ್ವನನ್ನು ಥಳಿಸಿ ಹತ್ಯೆಗೈದ ಘಟನೆ ಬಲಿಯಾ ಜಿಲ್ಲೆಯ ಸಹತ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನೈನಿ ಗ್ರಾಮದಲ್ಲಿ ನಡೆದಿದೆ.

ಶೋಭನಾಥ ಪಾಸ್ವಾನ್(30) ಕೊಲೆಯಾಗಿರುವ ವ್ಯಕ್ತಿ. ಆರೋಪಿ ಅಮಿತ್ ಸಿಂಗ್ ಎಂಬಾತ ರವಿವಾರ ಬೆಳಿಗ್ಗೆ ಪಾಸ್ವಾನ್ರ ಅಂಗಡಿಗೆ ಬಂದು ಕೆಲವು ಸಾಮಗ್ರಿಗಳನ್ನು ಖರೀದಿಸಿದ್ದ. ಪಾಸ್ವಾನ್ ಹಣ ಕೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದ್ದು,ಈ ವೇಳೆ ಪಾಸ್ವಾನ್ ಸಿಂಗ್‌ನನ್ನು ಥಳಿಸಿದ್ದ.

ಅಲ್ಲಿಂದ ತೆರಳಿದ್ದ ಸಿಂಗ್ ಕೆಲ ಸಮಯದ ಬಳಿಕ ತನ್ನ ನಾಲ್ವರು ಸಹಚರರೊಂದಿಗೆ ವಾಪಸ್ ಬಂದಿದ್ದು,ಗುಂಪು ಪಾಸ್ವಾನ್‌ನನ್ನು ಥಳಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪಾಸ್ವಾನ್‌ರನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News