ವಿಶ್ವ ವಿಜೇತ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮ

Update: 2019-07-29 14:48 GMT

ಹಿರಿಯಡ್ಕ, ಜು.29: ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮಂಗಳೂರಿನ ರಾಮ ಕೃಷ್ಣ ಆಶ್ರಮ ಮತ್ತು ರಾಮಕೃಷ್ಣ ಮಿಷನ್ ವತಿಯಿಂದ ಸ್ವಾಮಿ ವಿವೇಕಾನಂದರ ಶಿಕಾಗೋ ಉಪನ್ಯಾಸದ 125ನೇ ವರ್ಷಾನುಚರಣೆಯ ಪ್ರಯುಕ್ತ ವಿಶ್ವ ವಿಜೇತ ಉಪನ್ಯಾಸ ಸರಣಿಯ 108ನೇ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

 ಮುಖ್ಯ ಭಾಷಣಕಾರರಾಗಿ ಸುಳ್ಯದ ವಾಗ್ಮಿ ಕೃಷ್ಣ ಉಪಾಧ್ಯಾಯ ಮಾತನಾಡಿ, ಸ್ವಾಮಿ ವಿವೇಕಾನಂದರಿಂದ ಹಲವಾರು ವ್ಯಕ್ತಿಗಳು ಪ್ರಭಾವಿತರಾಗಿ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿ ಮೂಡಿಬರಲು ಸಾಧ್ಯವಾಗಿದೆ. ಕೃಷಿಕರಿಗೆ, ಉದ್ಯಮಿ ಗಳಿಗೆ ಪ್ರೇರಣೆದಾಯಿಯಾಗಿದ್ದ ವ್ಯಕ್ತಿತ್ವ ಅವರದ್ದು. ವಿದ್ಯಾರ್ಥಿ ಸಮುದಾಯ ವಿವೇಕಾನಂದರಿಂದ ಸ್ಪೂರ್ತಿ ಪಡೆದು ಜ್ಞಾನ ಸಂಪಾದಿಸುವವರಾಗಬೇಕೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ವಹಿಸಿ ದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಸರೋಜ ನಾಯಕ್, ಹಿರಿಯ ಉಪನ್ಯಾಸಕಿ ನಳಿನಾದೇವಿ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಬಿ.ಡಿ. ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿದರು. ಪಲ್ಲವಿ ವಂದಿಸಿದರು. ಶಿವ ಪ್ರಸಾದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News