×
Ad

ಗೋವುಗಳು ಹಿಂದು, ಅವುಗಳನ್ನು ಹೂಳಬಾರದು ಎಂದ ಬಿಜೆಪಿ ನಾಯಕ!

Update: 2019-07-29 21:42 IST

ಲಕ್ನೋ, ಜು.29: ಉತ್ತರ ಪ್ರದೇಶದ ಹಸುಗಳು ಹಿಂದುಗಳಾದ್ದು ಅವುಗಳನ್ನು ಮುಸಲ್ಮಾನರ ಪದ್ಧತಿಯಂತೆ ಹೂಳಬಾರದು ಎಂದು ಬಿಜೆಪಿ ನಾಯಕ ರಂಜಿತ್ ಶ್ರೀವಾಸ್ತವ ತಿಳಿಸಿದ್ದಾರೆ.

ನಗರ ಪಾಲಿಕೆಯ ಸಭೆಯಲ್ಲಿ ಮಾತನಾಡಿದ ಬಾರಬಂಕಿ ಪ್ರದೇಶದ ಬಿಜೆಪಿ ನಾಯಕ ರಂಜಿತ್ ಶ್ರೀವಾಸ್ತವ ಮೃತ ದನಗಳನ್ನು ಹೂಳಕೂಡದು. ಅವುಗಳಿಗಾಗಿ ವಿದ್ಯುತ್ ಧಾರಿತ ಸ್ಮಶಾನಗಳನ್ನು ನಿರ್ಮಿಸಬೇಕು ಎಂದು ತಿಳಿಸಿದ್ದಾರೆ. ಗೋವುಗಳ ಮೃತದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸಾಂಪ್ರದಾಯಿಕ ಹಿಂದು ಶೈಲಿಯ ಚಿತೆಯಲ್ಲಿ ಸುಡಬೇಕು ಎಂದು ಶ್ರೀವಾಸ್ತವ ಸೂಚಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ ಅವರು ಗಮನಹರಿಸಬೇಕೆಂದು ನಾನು ಕೋರುತ್ತೇನೆ. ನಾನು ನಗರ ಪಾಲಿಕೆಯ ಮಾಜಿ ಅಧ್ಯಕ್ಷನಾಗಿದ್ದು ಹಾಲಿ ಅಧ್ಯಕ್ಷೆಯ ಪತಿಯಾಗಿದ್ದೇನೆ. ಹಾಗಾಗಿ ಬಾರಬಂಕಿಯಲ್ಲಿ ಗೋವುಗಳಿಗೆ ಸ್ಮಶಾನ ನಿರ್ಮಿಸುವ ಪ್ರಸ್ತಾಪ ಸಭೆಯಲ್ಲಿ ಅಂಗೀಕಾರಗೊಳ್ಳಲು ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News