ಬಂಟ್ವಾಳ: ವಿದ್ಯುತ್‍ಶಾಕ್‍ ಗೆ ಕಾರ್ಮಿಕ ಬಲಿ

Update: 2019-07-30 17:14 GMT

ಬಂಟ್ವಾಳ, ಜು. 30: ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಎಡ್ಜ್‍ಫ್ಯೂಸ್ ಹಾಕಲೆಂದು ವಿದ್ಯುತ್ ಪರಿವರ್ತಕಕ್ಕೇರಿದ ಕಾರ್ಮಿಕನೋರ್ವ ವಿದ್ಯುತ್‍ಶಾಕ್‍ನಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.

ಕರೋಪಾಡಿ ಗ್ರಾಮದ ಕುರೋಡಿ ಫೆಲಿಕ್ಸ್ ಮೊಂತೆರೊ (39) ಮೃತಪಟ್ಟ ಕಾರ್ಮಿಕ.

ಇವರು ಮೆಸ್ಕಾಂ ಗುತ್ತಿಗೆ ಆಧಾರದ ನೌಕರರಾಗಿದ್ದು, ಹೈಟೆನ್ಶನ್ ಲೈನ್‍ಸ್ವಿಚ್ ಆಫ್ ಮಾಡಿದ್ದರೂ ಒಂದು ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ಗಮನಿಸದ ಫೆಲಿಕ್ಸ್ ಅವರು ಎಡ್ಜ್ ಫ್ಯೂಸ್ ಹಾಕಲೆತ್ನಿಸಿದಾಗ ವಿದ್ಯುತ್‍ಶಾಕ್ ಉಂಟಾಗಿದೆ. ಇದರಿಂದ ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದರು. ವಿದ್ಯುತ್ ಅಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ದಾರಿಯ ಮಧ್ಯೆ ಕೊನೆಯುಸಿರೆಳೆದರು  ಎಂದು ಸ್ಥಳೀಯರು ಮಾಹಿತಿ ನಿಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News