ಮಾದಕ ವಸ್ತು ಸಾಗಾಟ ಆರೋಪ: ನುಳ್ಳಿಪ್ಪಾಡಿಯ ಯುವಕನೋರ್ವನ ಸೆರೆ

Update: 2019-07-31 08:34 GMT

ಕಾಸರಗೋಡು, ಜು.31:  ಭಾರೀ ಮೌಲ್ಯದ ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ಯುವಕನೋರ್ವನನ್ನು ಕಾಸರಗೋಡು ನಗರ ಠಾಣಾ  ಪೊಲೀಸರು ಬಂಧಿಸಿದ್ದಾರೆ.

ನುಳ್ಳಿಪ್ಪಾಡಿ ನಿವಾಸಿ ರೋಬಿಯಾ(22) ಬಂಧಿತ ಾರೋಪಿ.  

ಖಚಿತ ಮಾಹಿತಿಯಂತೆ  ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 280 ಮೀ.ಗ್ರಾಂ ಮಾದಕ  ವಸ್ತು ಹಾಗೂ ಕಾರೊಂದನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಆರೋಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News