ಸರಕಾರಿ ವಸತಿಗೃಹದಿಂದ ಅಕ್ರಮ ನಿವಾಸಿಗಳ ಶೀಘ್ರ ತೆರವುಗೊಳಿಸುವ ಮಸೂದೆಗೆ ಲೋಕಸಭೆ ಅಂಗೀಕಾರ

Update: 2019-07-31 18:17 GMT

ಹೊಸದಿಲ್ಲಿ, ಜು.31: ಸರಕಾರಿ ವಸತಿಗೃಹಗಳಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ಶೀಘ್ರ ತೆರವುಗೊಳಿಸಲು ಅನುವು ಮಾಡಿಕೊಡುವ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರಕಿದೆ.

 ಸರಕಾರಿ ವಸತಿ (ಅನಧಿಕೃತ ನಿವಾಸಿಗಳ ತೆರವುಗೊಳಿಸುವ) ತಿದ್ದುಪಡಿ ಕಾಯ್ದೆ 2019ರ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ವಸತಿ ಮತ್ತು ಗ್ರಾಮೀಣ ವ್ಯವಹಾರ ಸಚಿವ ಹರ್ದೀಪ್ ಸಿಂಗ್ ಪುರಿ, ಹಲವು ಸಂಸದರು ಉಳಿದುಕೊಳ್ಳಲು ವಸತಿಯ ಅಗತ್ಯವಿರುವುದರಿಂದ ಈ ಮಸೂದೆಯನ್ನು ಅಂಗೀಕರಿಸಲು ಇದು ಸೂಕ್ತ ಸಮಯವಾಗಿದೆ ಎಂದರು.

ಸರಕಾರದ ಕೋಟಾದಡಿ ಬರುವ ಒಟ್ಟು 15,416 ವಸತಿ ಗೃಹಗಳಲ್ಲಿ 3081 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದವರು ತಿಳಿಸಿದರು. ಈ ಮಸೂದೆಯನ್ನು ಲೋಕಸಭೆ ಧ್ವನಿಮತದಿಂದ ಅಂಗೀಕರಿಸಿದೆ. ವಸತಿಗೃಹದಲ್ಲಿ ನೆಲೆಸಿರುವವರಿಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಅವಧಿಗೆ ನಷ್ಟ ಶುಲ್ಕ ವಿಧಿಸಲು ಈ ಮಸೂದೆ ಅವಕಾಶ ಮಾಡಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News