ಪಾಪ್ಯುಲರ್ ಫ್ರಂಟ್: ಉನ್ನತ ಶಿಕ್ಷಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-08-01 08:17 GMT

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 'ವಿದ್ಯಾರ್ಥಿವೇತನ - 2019'ಯೋಜನೆಯನ್ನು ಹೊಸದಿಲ್ಲಿಯಲ್ಲಿ ಇಂದು ಪ್ರಕಟಿಸಿದೆ.

ಈ ಯೋಜನೆಯು ಹೈಯರ್ ಸೆಕೆಂಡರಿ (ದ್ವಿತೀಯ ಪಿಯುಸಿ) ಮುಗಿಸಿದ ನಂತರ ಉನ್ನತ ವ್ಯಾಸಂಗ ಮಾಡಲು ಬಯಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸ್ಕಾಲರ್ ಶಿಪ್ ನೀಡುವ ಮೂಲಕ ಶೈಕ್ಷಣಿಕ ನೆರವನ್ನು ನೀಡಲಿದೆ ಎಂದು ಪಿಎಫ್ಐ ತಿಳಿಸಿದೆ.

 2019-20ನೇ ಶೈಕ್ಷಣಿಕ ವರ್ಷದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿ  ಕಳೆದ ಒಂಬತ್ತು ವರ್ಷಗಳಿಂದ ಪಾಪ್ಯುಲರ್ ಫ್ರಂಟ್ ಈ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತರುತ್ತಿದೆ.

ಒಂದು ವರ್ಷಕ್ಕೆ ಕಡಿಮೆಯಿಲ್ಲದ ಪಿಜಿ ಕೋರ್ಸ್‌ಗಳು, ಪದವಿ, ಡಿಪ್ಲೊಮಾ ಅಥವಾ ಇತರ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ ಗೆ ಅರ್ಹರಾಗಿರುತ್ತಾರೆ.  ಪತ್ರಿಕೋದ್ಯಮ, ಕಾನೂನು ಮತ್ತು ಸೋಶಿಯಲ್ ವರ್ಕ್ ವಿಷಯಗಳನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.  ಅರ್ಜಿಯು ಜುಲೈ 31, 2019 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಆ. 31 ಕೊನೆಯ ದಿನ ಆಗಿದೆ. ಅರ್ಜಿಯನ್ನು www.popularfrontindia.org ನಲ್ಲಿ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ಪಾಪ್ಯುಲರ್ ಫ್ರಂಟ್ 2011-12ನೇ ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿವೇತನ ವಿತರಣೆಯನ್ನು ಪ್ರಾರಂಭಿಸಿತು.  ಭಾರತದ 13 ರಾಜ್ಯಗಳಲ್ಲಿ 12,545 ವಿದ್ಯಾರ್ಥಿಗಳಿಗೆ (6,024 ಬಾಲಕರು ಮತ್ತು 6,521 ಬಾಲಕಿಯರು) 7.78 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ. ವಿದ್ಯಾರ್ಥಿಯು ತನ್ನ ಕೋರ್ಸನ್ನು ಪೂರ್ಣಗೊಳಿಸಿದ ಬಳಿಕ ಮತ್ತು ಜವಾಬ್ಧಾರಿಯುತ ಪ್ರಜೆಗಳಾಗಿ ಉದ್ಯೋಗಕ್ಕೆ ನೇಮಕಗೊಂಡ ನಂತರ ಸಮಾಜಕ್ಕೆ ಮತ್ತೆ ಕೊಡುಗೆ ನೀಡುವಂತೆ ಪಾಪ್ಯುಲರ್ ಫ್ರಂಟ್ ಉತ್ತೇಜಿಸುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News