'ವಿಟ್ಲ ಕಾರುಣ್ಯ ಟೀಮ್' ಚಾರಿಟೇಬಲ್ ಟ್ರಸ್ಟ್ ರಚನೆ

Update: 2019-08-01 09:57 GMT

ವಿಟ್ಲ: ಶೇಖ್ ಆದಂ ವಿ. ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ 'ವಿಟ್ಲ ಕಾರುಣ್ಯ ಟೀಮ್' ಚಾರಿಟೇಬಲ್ ಟ್ರಸ್ಟ್ ರಚಿಸಲಾಯಿತು.

ಇದರಲ್ಲಿ ಹನ್ನೊಂದು ಮಂದಿಯ ನಿರ್ದೇಶಕರ ಮಂಡಳಿ ಇದ್ದು, ಅಧ್ಯಕ್ಷರಾಗಿ ಉದ್ಯಮಿ ವಿ.ಎಚ್. ಅಶ್ರಫ್ ವಿಟ್ಲ, ಕಾರ್ಯದರ್ಶಿಯಾಗಿ ನ್ಯಾಯವಾದಿ ಅಬೂಬಕರ್ ವಿಟ್ಲ, ಕೋಶಾಧಿಕಾರಿಯಾಗಿ ಉಪನ್ಯಾಸಕ ಮುಸ್ತಫಾ ಖಲೀಲ್ ಮೇಗಿನಪೇಟೆ, ನಿರ್ದೇಶಕರಾಗಿ ಅಶ್ರಫ್ ಮೊಹಮ್ಮದ್ ಪೊನ್ನೋಟು, ಅಬ್ದುಲ್ ಅಝೀಝ್ ಹಳೆಮನೆ, ಮೊಹಮ್ಮದ್ ಇಕ್ಬಾಲ್ ಶೀತಲ್, ಅಬ್ದುಲ್ ಖಾದರ್ ಬೊಬ್ಬೆಕ್ಕೇರಿ (ಮದೀನಾ), ಝುಬೈರ್  ಬೊಬ್ಬೆಕ್ಕೇರಿ, ಶೇಖ್ ಅದಂ ವಿ, ಯೂಸುಫ್ ಗಮಿ, ಶಾಫಿ ಜೋಗಿಮಠ ಅವರನ್ನು ಆರಿಸಲಾಯಿತು.

ವಿಟ್ಲ ಜಮಾತಿನ ವ್ಯಾಪ್ತಿಯಲ್ಲಿ ಬರುವ ಸಮಾನ ಮನಸ್ಕರನ್ನು  ಇದರಲ್ಲಿ ಸೇರಿಸಿ ಪ್ರತಿಯೊಬ್ಬರಿಂದ ತಿಂಗಳಿಗೆ 200 ರೂ. ಅಥವಾ ವಾರ್ಷಿಕ 2400 ರೂಪಾಯಿ ಸಂಗ್ರಹಿಸಿ ವಿಟ್ಲ ಜಮಾಅತ್ ಸದಸ್ಯರೊಳಗೆ ಸಹಾಯ ನೀಡುವ ಉದ್ದೇಶ ಹೊಂದಲಾಗಿದೆ. ಜಮಾಅತಿನ ಬಡ ಕುಟುಂಬದ ಯಜಮಾನ ಮರಣ ಹೊಂದಿದಾಗ, ಜಮಾಅತ್ ಗೊಳಪಟ್ಟ ವ್ಯಕ್ತಿ ತೀವ್ರ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದಾಗ ಅಥವಾ  ದುಡಿಯಲು ಆಶಕ್ತನಾದಾಗ, ಜಮಾಅತಿನ ಬಡ/ಅನಾಥ ಹೆಣ್ಮಕ್ಕಳ ವಿವಾಹ ಸಂದರ್ಭ, ಜಮಾಅತಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸಭೆಯಲ್ಲಿ ಆಗಿಂದಾಗ್ಗೆ ನಿರ್ಧರಿಸುವ ಇನ್ನಿತರ ಸಂದರ್ಭಗಳಲ್ಲಿ ಸಹಕಾರ ನೀಡಿ ಮಾದರೀಯೋಗ್ಯ ಜಮಾಅತ್ ಮಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಸ್ತಫಾ ಖಲೀಲ್ ಮೇಗಿನಪೇಟೆ ಸ್ವಾಗತಿಸಿದರು. ವಿ.ಎಚ್. ಅಶ್ರಫ್ ವಂದಿಸಿದರು. ಅಬೂಬಕರ್ ನೋಟರಿ ಪ್ರಾಸ್ತಾವಿಕ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News