ಇರಾನ್ ವಿದೇಶ ಸಚಿವರ ವಿರುದ್ಧ ದಿಗ್ಬಂಧನ ಘೋಷಿಸಿದ ಅಮೆರಿಕ

Update: 2019-08-01 14:18 GMT

ವಾಶಿಂಗ್ಟನ್, ಆ. 1: ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ವಿರುದ್ಧ ಅಮೆರಿಕ ಬುಧವಾರ ದಿಗ್ಬಂಧನಗಳನ್ನು ವಿಧಿಸಿದೆ.

ಅದೇ ವೇಳೆ, ಇರಾನ್ ತೈಲ ನಿಷೇಧ ವಿಚಾರದಲ್ಲಿ ಭಾರತದಂಥ ಶ್ರೇಷ್ಠ ಗೆಳೆಯ ಹಾಗೂ ಭಾಗೀದಾರನ ಸಹಕಾರವು ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಅಮೆರಿಕ ಆಡಳಿತ ಹೇಳಿದೆ.

‘‘ಭಾರತದಂಥ ಶ್ರೇಷ್ಠ ಗೆಳೆಯ ಹಾಗೂ ಭಾಗೀದಾರ ಹಾಗೂ ಚೀನಾದಂಥ ಕಡಿಮೆ ಹೊಂದಾಣಿಕೆಯ ದೇಶಗಳಿಂದ ಲಭಿಸಿದ ಸಹಕಾರದಿಂದ ನಾವು ತೃಪ್ತರಾಗಿದ್ದೇವೆ. ಈ ದೇಶಗಳು ತಮ್ಮ ವ್ಯಾಪಾರ ಭಾಗೀದಾರನಾಗಿ ಅಮೆರಿಕವನ್ನು ಆಯ್ಕೆ ಮಾಡಿಕೊಂಡಿವೆ, ಇರಾನನ್ನಲ್ಲ’’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇರಾನ್ ವಿದೇಶ ಸಚಿವರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಘೋಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಭಾರೀ ಪ್ರಮಾಣದ ಇಂಧನ ಅವಶ್ಯಕತೆಯನ್ನು ಹೊಂದಿರುವ ಹೊರತಾಗಿಯೂ, ಭಾರತವು ಅಭೂತಪೂರ್ವ ನಿರ್ಧಾರವೊಂದನ್ನು ತೆಗೆದುಕೊಂಡು ಅಮೆರಿಕಕ್ಕೆ ಸಹಕಾರ ನೀಡಿದೆ.

ಇರಾನ್‌ನೊಂದಿಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೊಂದಿರುವ ಹೊರತಾಗಿಯೂ ಭಾರತವು ಆ ದೇಶದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News