ಉತ್ತರ ಕೊರಿಯದ ಸೈನಿಕ ದಕ್ಷಿಣಕ್ಕೆ ಪಲಾಯನ

Update: 2019-08-01 15:55 GMT

ಸಿಯೋಲ್, ಆ. 1: ಉತ್ತರ ಮತ್ತು ದಕ್ಷಿಣ ಕೊರಿಯಗಳನ್ನು ವಿಭಜಿಸುವ ಸೇನಾರಹಿತ ವಲಯವನ್ನು ದಾಟಿ ಉತ್ತರ ಕೊರಿಯದ ಸೈನಿಕರೊಬ್ಬರು ದಕ್ಷಿಣ ಕೊರಿಯ ಪ್ರವೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯದ ಸೇನೆ ಗುರುವಾರ ತಿಳಿಸಿದೆ.

ಭಾರೀ ಭದ್ರತೆಯ ಗಡಿಯಲ್ಲಿ ಈ ರೀತಿಯಾಗಿ ಉತ್ತರ ಕೊರಿಯದಿಂದ ನೇರವಾಗಿ ಸೈನಿಕನೊಬ್ಬ ಗಡಿ ದಾಟಿ ಬರುವುದು ಭಾರೀ ಅಪರೂಪವಾಗಿದೆ.

65 ವರ್ಷಗಳ ಹಿಂದೆ ಯುದ್ಧದ ಮೂಲಕ ಎರಡು ದೇಶಗಳು ಬೇರ್ಪಟ್ಟ ಬಳಿಕ ಈವರೆಗೆ 30,000ಕ್ಕೂ ಅಧಿಕ ಉತ್ತರ ಕೊರಿಯನ್ನರು ತಪ್ಪಿಸಿಕೊಂಡು ದಕ್ಷಿಣ ಕೊರಿಯಕ್ಕೆ ಬಂದಿದ್ದಾರೆ ಎನ್ನುವುದನ್ನು ದಕ್ಷಿಣ ಕೊರಿಯದ ಅಂಕಿಸಂಖ್ಯೆಗಳು ಹೇಳುತ್ತವೆ.

ಈ ವ್ಯಕ್ತಿಯು ಬುಧವಾರ ತಡ ರಾತ್ರಿ ಗಡಿಯಲ್ಲಿರುವ ಸೇನಾ ಗುರುತು ರೇಖೆಯನ್ನು ದಾಟಿ ದಕ್ಷಿಣದತ್ತ ಬರುತ್ತಿರುವುದನ್ನು ಗುರುತಿಸಲಾಯಿತು ಎಂದು ಹೇಳಿಕೆಯೊಂದರಲ್ಲಿ ಸಿಯೋಲ್‌ನ ಸೇನಾ ಮುಖ್ಯಸ್ಥರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅವರನ್ನು ನಿಯಮಗಳಿಗೆ ಅನುಗುಣವಾಗಿ ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News