ಸುಪ್ರೀಂಕೋರ್ಟ್ ಮೆಟ್ಟಿಲೇರಿದ 14 ಅನರ್ಹ ಶಾಸಕರು

Update: 2019-08-01 16:48 GMT

ಹೊಸದಿಲ್ಲಿ, ಆ.1: ತಮ್ಮನ್ನು ಅನರ್ಹಗೊಳಿಸಿದ ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಅವರ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ 14 ಮಂದಿ ಅನರ್ಹಗೊಂಡ ಶಾಸಕರು ಗುರುವಾರ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ.

 ತಮ್ಮ ಅನರ್ಹಗೊಳಿಸುವ ಕೆ.ಆರ್.ರಮೇಶ್ ಕುಮಾರ್ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಈ ಶಾಸಕರು ಇಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದಾರೆ.

ಅ ನರ್ಹಗೊಂಡ ಗೋಕಾಕ್, ಅಥಣಿ ಹಾಗ ರಾಣಿ ಬೆನ್ನೂರು ಕ್ಷೇತ್ರಗಳ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪ್ರಕಾಶ್ ಆರ್. ತಮ್ಮ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ.

   

  ಇಂದು ಉಳಿದ ಅನರ್ಹಗೊಂಡ ಕಾಂಗ್ರೆಸ್ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಆನಂದ್‌ ಸಿಂಗ್, ರೋಶನ್ ಬೇಗ್, ಕೆ.ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್ ಹಾಗೂ ಶ್ರೀಮಂತ ಪಾಟೀಲ್ ಹಾಗೂ ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣ್ ಗೌಡ ಹಾಗೂ ಗೋಪಾಲಯ್ಯ ಇಂದು ಸುಪ್ರೀಂಕೋರ್ಟ್‌ಗೆ ಅನರ್ಹತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ವಿರುದ್ಧ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ನಡೆಸಿದ ಅನರ್ಹತೆ ಪ್ರಕ್ರಿಯೆಗಳು ಹಾಗೂ ಅದಕ್ಕೆ ಅವರು ನೀಡಿದ ವಿವರಣೆಗಳ ದಾಖಲೆಯನ್ನು ಪಡೆದುಕೊಳುವಂತೆ ಅನರ್ಹಗೊಂಡ ಇಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪ್ರಕಾಶ್ ಆರ್. ಅವರನ್ನು ಜುಲೈ 25ರಂದು ಆಗಿನ ಸ್ಪೀಕರ್ ಕೆ.ಆರ್.ರಮೇಶ್ ಆನರ್ಹಗೊಳಿಸಿದ್ದರು. ಉಳಿದ 14 ಶಾಸಕರನ್ನು ಬಿಎಸ್‌ವೈ ಸರಕಾರದ ವಿಸ್ವಾಸಮತ ಯಾಚನೆಗೆ ಮುನ್ನಾ ದಿನ ಅಂದರೆ ಜುಲೈ 28ರಂದು ಅನರ್ಹಗೊಳಿಸಿದ್ದರು. ತಮ್ಮನ್ನು ಅನರ್ಹಗೊಳಿಸಿದ ಆರು ದಿನಗಳ ಮೊದಲೇ ಜುಲೈ 6ರಂದು ತಾವು ರಾಜೀನಾಮೆಗಳನ್ನು ಸಲ್ಲಿಸಿದ್ದಾಗಿಯೂ ಅನರ್ಹಗೊಂಡ ಕಾಂಗ್ರೆಸ್‌ನ ಉಚ್ಚಾಟಿತ ಶಾಸಕರು ಅರ್ಜಿಯಲ್ಲಿ ತಿಳಿಸಿದ್ದಾರೆ. 14 ಮಂದಿ ಅನರ್ಹಗೊಂಡ ಶಾಸಕರನ್ನು ಕಾಂಗ್ರೆಸ್ ಪಕ್ಷವು ಮಂಗಳವಾರ ಉಚ್ಚಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News