ನೋಟುಗಳನ್ನು ಆಗಾಗ್ಗೆ ಬದಲಿಸುತ್ತಿರುವುದೇಕೆ?: ಆರ್ ಬಿಐಗೆ ಹೈಕೋರ್ಟ್ ಪ್ರಶ್ನೆ

Update: 2019-08-01 17:14 GMT

ಹೊಸದಿಲ್ಲಿ, ಆ.1: ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಗಾತ್ರ ಮತ್ತು ಇತರ ವೈಶಿಷ್ಟ್ಯಗಳನ್ನು ಆಗಾಗ್ಗೆ ಬದಲಾಯಿಸುತ್ತಿರಲು ಕಾರಣವೇನು ಎಂದು ಬಾಂಬೆ ಹೈಕೋರ್ಟ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ವನ್ನು ಪ್ರಶ್ನಿಸಿದೆ.

ಅಂಧರ ರಾಷ್ಟ್ರೀಯ ಸಂಘಟನೆ (ಎನ್ ಎಬಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಪ್ರದೀಪ್ ನಂದ್ರಜೋಗ್ ಮತ್ತು ಜಸ್ಟಿಸ್ ಎಂಎಂ ಜಾಮ್ದಾರ್ ಅವರಿದ್ದ ವಿಭಾಗೀಯ ಪೀಠ ಈ ಪ್ರಶ್ನೆ ಮುಂದಿಟ್ಟಿದೆ.

ಆರ್ ಬಿಐ ಬಿಡುಗಡೆಗೊಳಿಸಿರುವ ನೂತನ ನೋಟುಗಳ ಗುರುತಿಸುವಿಕೆ ಮತ್ತು ವ್ಯತ್ಯಾಸ ಕಂಡುಹಿಡಿಯುವಲ್ಲಿ ಅಂಧರಿಗೆ ಕಷ್ಟವಾಗುತ್ತಿದೆ ಎಂದು ಎನ್ ಎಬಿ ಅರ್ಜಿಯಲ್ಲಿ ಆರೋಪಿಸಿತ್ತು.

“ಕರೆನ್ಸಿಗಳ ಗಾತ್ರ ಮತ್ತು ಇತರ ವೈಶಿಷ್ಟ್ಯಗಳನ್ನು ಆಗಾಗ್ಗೆ ಬದಲಿಸುತ್ತಿರಲು ಕಾರಣವೇನು ಎಂದು ನಾವು ಆರ್ ಬಿಐ ಜೊತೆ ಕೇಳಲು ಬಯಸುತ್ತೇವೆ. ಜಗತ್ತಿನ ಇನ್ಯಾವ ದೇಶವೂ ಆಗಾಗ್ಗೆ ತನ್ನ ಕರೆನ್ಸಿಯನ್ನು ಬದಲಿಸುವುದಿಲ್ಲ” ಎಂದು ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News