×
Ad

ತಾಯಿ ಜೊತೆ ಮಲಗಿದ್ದ ಬಾಲಕಿಯ ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದು, ತಲೆ ಕತ್ತರಿಸಿದರು…

Update: 2019-08-01 23:02 IST

ಜಮ್ಶೇಡ್ ಪುರ, ಆ.1: ತಾಯಿ ಜೊತೆ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ 3 ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ತಲೆ ಕತ್ತರಿಸಿದ ಘಟನೆ ಜಾರ್ಖಂಡ್ ನ ಜಮ್ಶೇಡ್ ಪುರದಲ್ಲಿ ನಡೆದಿದೆ.

ಇಡೀ ದಿನ ಬಾಲಕಿಯ ಅತ್ಯಾಚಾರಗೈದು ನಂತರ ಅಳು ನಿಲ್ಲಿಸದೇ ಇದ್ದುದಕ್ಕಾಗಿ ಕೊಲೆಗೈದಿದ್ದೇವೆ ಎಂದು ಆರೋಪಿಗಳಾದ ರಿಂಕು ಮತ್ತು ಆತನ ಗೆಳೆಯ ಕೈಲಾಶ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕಸದ ರಾಶಿ ಸಮೀಪದ ಪೊದೆಯೊಂದರಲ್ಲಿ ಬಾಲಕಿಯ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿತ್ತು. ಬಾಲಕಿಯ ತಲೆಯನ್ನು ಈ ದುಷ್ಕರ್ಮಿಗಳು ಕತ್ತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News