ಗ್ರಾಹಕರಿಗೆ ಶುಭ ಸುದ್ದಿ: ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

Update: 2019-08-01 18:34 GMT

 ಹೊಸದಿಲ್ಲಿ, ಆ.1: ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 62.50 ರೂ. ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ) ಪ್ರಕಟಣೆ ತಿಳಿಸಿದೆ.

ಕಳೆದ ತಿಂಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 100.50 ರೂ. ಕಡಿತಗೊಳಿಸಲಾಗಿತ್ತು. ಇದೀಗ ಸತತ ದ್ವಿತೀಯ ತಿಂಗಳೂ ಬೆಲೆ ಇಳಿದಿದ್ದು, ಎರಡು ತಿಂಗಳಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು 163 ರೂ. ಇಳಿಕೆಯಾಗಿದೆ.

 ದಿಲ್ಲಿಯಲ್ಲಿ 62.50 ರೂ, ಮುಂಬೈ ಮತ್ತು ಚೆನ್ನೈಯಲ್ಲಿ 62 ರೂ. ಇಳಿಕೆಯಾಗಿದೆ. ಆಗಸ್ಟ್ 1ರಿಂದಲೇ ಹೊಸ ದರ ಅನ್ವಯಿಸಲಿದೆ. ಸರಕಾರ ಪ್ರತೀ ಮನೆಗೆ ವರ್ಷಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ಈಗ ದಿಲ್ಲಿಯಲ್ಲಿ 574.50 ರೂ. ಕೋಲ್ಕತಾದಲ್ಲಿ 601 ರೂ. ಮುಂಬೈಯಲ್ಲಿ 546.50 ರೂ. ಹಾಗೂ ಚೆನ್ನೈಯಲ್ಲಿ 590.50 ರೂ. ಆಗಿದೆ ಎಂದು ಐಒಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News