×
Ad

ಚಂದ್ರಯಾನ 2 ನಾಲ್ಕನೇ ಕಕ್ಷೆಗೆ ಏರಿಸುವ ಕಾರ್ಯ ಪೂರ್ಣ

Update: 2019-08-02 21:30 IST

ಚೆನ್ನೈ, ಆ.2: ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ನಾಲ್ಕನೇ ಕಕ್ಷೆಗೆ ಏರಿಸುವ ಕಾರ್ಯವನ್ನು ಶುಕ್ರವಾರ ಮಧ್ಯಾಹ್ನ 3.27ರ ವೇಳೆಗೆ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ನೌಕೆಯ ಮೋಟಾರ್‌ಗಳನ್ನು 646 ಸೆಕೆಂಡ್‌ಗಳ ಕಾಲ ಉರಿಸುವ ಮೂಲಕ ಚಂದ್ರಯಾನ-2ನ್ನು 277*89,472ಕಿ.ಮೀ ಎತ್ತರಕ್ಕೆ ಏರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಐದನೇ ಕಕ್ಷೆ ಏರಿಕೆ ಪ್ರಕ್ರಿಯೆ ಆಗಸ್ಟ್ 6ರಂದು ಮಧ್ಯಾಹ್ನ 2.30ರಿಂದ 3.30ರ ನಡುವೆ ನಡೆಯಲಿದೆ.

ಬಾಹ್ಯಾಕಾಶ ನೌಕೆ, ಆರ್ಬಿಟರ್, ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಚಂದ್ರಯಾನ 2ನ್ನು ಚಂದ್ರನ ಬಳಿಗೆ ಕೊಂಡೊಯ್ಯುವ ಟ್ರಾನ್ಸ್‌ಲೂನಾರ್ ಇನ್ಸರ್ಶನ್ ಆಗಸ್ಟ್ 14ರಂದು ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News