×
Ad

‘ಹಿಂದೂ ಡೆಲಿವರಿ ಬಾಯ್’ ಬೇಕೆಂದ ಅಮಿತ್ ಶುಕ್ಲಾನ ‘ವಿಕೃತಿ’ ಬಯಲುಗೊಳಿಸಿದ ಹಳೆಯ ಟ್ವೀಟ್ ಗಳು!

Update: 2019-08-02 22:41 IST

ಇತ್ತೀಚೆಗೆ ಝೊಮ್ಯಾಟೊ ಗ್ರಾಹಕನೊಬ್ಬ ‘ಹಿಂದೂಯೇತರ’ ಡೆಲಿವರಿ ಬಾಯ್ ಆಹಾರ ನೀಡಲು ಬರುತ್ತಿದ್ದಾನೆ ಎಂಬ ಕಾರಣಕ್ಕಾಗಿ ಆರ್ಡರ್ ಕ್ಯಾನ್ಸಲ್ ಮಾಡಿದ್ದ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆಹಾರದ ವಿಚಾರದಲ್ಲೂ ದ್ವೇಷ ಹರಡಿದ್ದ ಅಮಿತ್ ಶುಕ್ಲಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರೆ, ಕೆಲವು ಜನರು ಆತನ ಬೆಂಬಲಕ್ಕೆ ನಿಂತಿದ್ದರು.

ಇದೀಗ ಇದೇ ಅಮಿತ್ ಶುಕ್ಲಾನ ವಿಕೃತ ಮನಸ್ಥಿತಿಯು ಆತನ ಹಳೆಯ ಟ್ವೀಟ್ ಗಳಿಂದ ಅನಾವರಣಗೊಂಡಿದೆ. ಆತ 2013ರಲ್ಲಿ ಮಾಡಿದ್ದ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳು ವೈರಲ್ ಆಗುತ್ತಿವೆ. 2013ರಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಫೋಟೊಗೆ ಇದೇ ಅಮಿತ್ ಶುಕ್ಲಾ, “ತಸ್ಲೀಮಾ ನಸ್ತೀನ್, ನಿಮಗೆ ದೊಡ್ಡ ಸ್ತನಗಳಿವೆ ಎಂದು ನಾನು ಹೇಳುತ್ತೇನೆ. ನನ್ನ ಕಾಮೆಂಟ್ ಅನ್ನು ಲೈಕ್ ಮಾಡುತ್ತೀರಿ ಎಂದು ಭಾವಿಸುತ್ತೇನೆ” ಎಂದಿದ್ದ.

ಈತನ ವಿಕೃತ ಮನಸ್ಥಿತಿಯ ಕಾಮೆಂಟ್ ನ ಸ್ಕ್ರೀನ್ ಶಾಟ್ ಅನ್ನು ಟ್ವೀಟ್ ಮಾಡಿರುವ ‘ಗಬ್ಬರ್’ ಎನ್ನುವ ಖಾತೆಯು, “#IStandWithAmit ಎಂದು ಟ್ವೀಟ್ ಮಾಡುತ್ತಿರುವವರೇ, ಯಾರು ಅಮಿತ್? ಈತ” ಎಂದು ಬರೆದಿದ್ದಾರೆ. ನಂತರ ಈ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ.  ಈತನ ವಿಕೃತಿ ಇಷ್ಟಕ್ಕೇ ಕೊನೆಗೊಂಡಿಲ್ಲ 2018ರಲ್ಲಿ ಅಮಿತ್ ಶುಕ್ಲಾ, “ಪ್ರಿಯಾಂಕಾ ಚೋಪ್ರಾಳ ಜೀವನಸಾಧನೆಯೆಂದರೆ ಸ್ತನಗಳು ಮತ್ತು ಸೊಂಟ” ಎಂದು ಟ್ವೀಟ್ ಮಾಡಿದ್ದ.

ಈತನ ಈ ಟ್ವೀಟ್ ನ ಸ್ಕ್ರೀನ್ ಶಾಟ್ ಗಳು ಕೂಡ ಈಗ ವೈರಲ್ ಆಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News