×
Ad

ಚೀನಾ ನೇತೃತ್ವದ ವ್ಯಾಪಾರ ಒಪ್ಪಂದವನ್ನು ಭಾರತವು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ

Update: 2019-08-02 23:07 IST

 ಹೊಸದಿಲ್ಲಿ, ಆ.2: ಕೈಗಾರಿಕೆಗಳು ಮತ್ತು ರೈತರ ವಿರೋಧದಿಂದಾಗಿ ಚೀನಾ ಬೆಂಬಲಿತ ಏಷ್ಯಾ-ಪೆಸಿಫಿಕ್ ವ್ಯಾಪಾರ ಒಪ್ಪಂದಕ್ಕೆ ಭಾರತವು ಸಹಿ ಹಾಕುವ ಸಾಧ್ಯತೆಯಿಲ್ಲ ಎಂದು ಸಂಘ ಪರಿವಾರ ಸಂಘಟನೆ ಸ್ವದೇಶಿ ಜಾಗರಣ ಮಂಚ್(ಎಸ್‌ಜೆಎಂ) ಶುಕ್ರವಾರ ಹೇಳಿದ್ದು,ಇದರೊಂದಿಗೆ ಬೃಹತ್ ಮುಕ್ತ ವ್ಯಾಪಾರ ವಲಯವನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಹಿನ್ನಡೆಯುಂಟಾಗಿದೆ.

 ವಿಶ್ವದ ಶೇ.45ರಷ್ಟು ಜನಸಂಖ್ಯೆಯನ್ನು ಹೊಂದಿರುವ ಭೂಭಾಗದಲ್ಲಿ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ನೂತನ ಪ್ರಯತ್ನವಾಗಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ)ಯ ನಿಬಂಧನೆಗಳ ಕುರಿತು ಮಾತುಕತೆಗಾಗಿ 16 ರಾಷ್ಟ್ರಗಳ ವಾಣಿಜ್ಯ ಸಚಿವರು ಈ ವಾರ ಬೀಜಿಂಗ್‌ನಲ್ಲಿ ಸೇರುತ್ತಿದ್ದಾರೆ. ಆದರೆ ಮಾರುಕಟ್ಟೆ ಪ್ರವೇಶ ಮತ್ತು ರಕ್ಷಿತ ಸರಕುಗಳ ಪಟ್ಟಿಗಳ ಕುರಿತು ಚೀನಾ ಮತ್ತು ಭಾರತದ ನಡುವಿನ ವಿವಾದಗಳಿಂದಾಗಿ ಒಪ್ಪಂದದ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಗತಿಯು ನಿಧಾನಗೊಂಡಿದೆ.

ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಂಸತ್ತಿನ ಕಾರ್ಯಭಾರಗಳಿಂದಾಗಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಮತ್ತು ಅಧಿಕಾರಿಗಳನ್ನು ರವಾನಿಸಿದ್ದಾರೆ.

ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಬೆಂಬಲ ಅಲ್ಪವಾಗಿದೆ. ಈ ಬಗ್ಗೆ ವ್ಯಾಪಕ ಸಮಾಲೋಚನೆಗಳ ಸಂದರ್ಭ ಯಾವುದೇ ಕ್ಷೇತ್ರವು ಆರ್‌ಸಿಇಪಿಗೆ ಭಾರತವು ಸಹಿ ಹಾಕುವುದನ್ನು ಬೆಂಬಲಿಸಿಲ್ಲ ಎಂದು ಎಸ್‌ಜೆಎಂನ ಅಶ್ವನಿ ಮಹಾಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News