ರಶ್ಯ ಬಾಕ್ಸಿಂಗ್ ಟೂರ್ನಿ: ಪದಕ ಖಚಿತಪಡಿಸಿದ ಗೌರವ್, ಗೋವಿಂದ್

Update: 2019-08-02 18:05 GMT

ಹೊಸದಿಲ್ಲಿ, ಆ.2: ರಶ್ಯದ ಕಸ್ಲಿಸ್ಕ್‌ನಲ್ಲಿ ನಡೆಯುತ್ತಿರುವ ಮುಹಮ್ಮದ್ ಸಲಾಂ ಉಮಖನೊವ್ ಸ್ಮರಣಾರ್ಥ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಭಾರತದ ಗೌರವ್ ಸೋಳಂಕಿ ಮತ್ತು 2019 ಇಂಡಿಯಾ ಓಪನ್ ಬೆಳ್ಳಿ ಪದಕ ವಿಜೇತ ಗೋವಿಂದ ಸಹಾನಿ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೆ ಎರಡು ಪದಕಗಳನ್ನು ಖಚಿತಪಡಿಸಿದ್ದಾರೆ. ಈ ವರ್ಷದ ಇಂಡಿಯಾ ಓಪನ್‌ನಲ್ಲಿ ಕಂಚು ಗೆದ್ದಿದ್ದ ಗೌರವ್, ರಶ್ಯದ ಮಸ್ಕಿಮ್ ಶೆರ್ನಿಶೇವ್ ಅವರನ್ನು 3-2 ಅಂತರದಿಂದ ಮಣಿಸುವ ಮೂಲಕ 56 ಕೆ.ಜಿ ವಿಭಾಗದಲ್ಲಿ ನಾಲ್ಕನೇ ಹಂತಕ್ಕೆ ಪ್ರವೇಶ ಪಡೆದರು. ಈ ವರ್ಷದ ಆರಂಭದಲ್ಲಿ ನಡೆದ ಜೀಬೀ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗೋವಿಂದ್, 49 ಕೆ.ಜಿ ವಿಭಾಗದಲ್ಲಿ ತಜಿಕಿಸ್ತಾನದ ಶೆರ್ಮುಕಮ್ಮದ್ ರುಸ್ತಮೊವ್ ಅವರನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಮತ್ತೊಂದೆಡೆ, 52 ಕೆ.ಜಿ ವಿಭಾಗದಲ್ಲಿ ಭಾರತದ ಆಶೀಷ್ ್ಶ ರಶ್ಯದ ಇಸ್ಲಾಮಿದ್ದೀನ್ ಅಲಿ ಸುಲ್ತಾನ್ ಅವರ ವಿರುದ್ಧ 1-4 ಅಂತರದಿಂದ ಸೋಲೊಪ್ಪುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದರು. 2018ರ ಇಂಡಿಯಾ ಓಪನ್‌ನಲ್ಲಿ ಚಿನ್ನ ಜಯಿಸಿದ್ದ ಸಂಜೀತ್ ರಶ್ಯದ ಡೇನಿಯಲ್ ಲುತೈ ವಿರುದ್ಧದ ಪಂದ್ಯದ ಮೊದಲ ಸುತ್ತಿನಲ್ಲೇ ತಲೆಗೆ ಗಾಯ ಮಾಡಿಕೊಳ್ಳುವ ಮೂಲಕ ಪಂದ್ಯದಿಂದ ಹೊರ ನಡೆದರು. ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಉಪಾಂತ್ಯ ತಲುಪಿರುವ ಕಾರಣ ಭಾರತ ಆರು ಪದಕಗಳನ್ನು ಖಚಿತಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News