×
Ad

ಥಾಯ್ಲೆಂಡ್ ಓಪನ್: ಸೆಮಿ ಫೈನಲ್‌ಗೆ

Update: 2019-08-02 23:52 IST

ಬ್ಯಾಂಕಾಕ್, ಆ.2: ಭಾರತದ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್‌ನ ಪುರುಷರ ಡಬಲ್ಸ್ ಪಂದ್ಯದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಕೊರಿಯದ ಕ್ವಾಲಿಫೈಯರ್ ಚೊಯ್ ಸೊಲ್ಗು ಹಾಗೂ ಸಿಯೊ ಸೆವುಂಗ್ ವಿರುದ್ಧ 21-17, 17-21, 21-19 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಕೊರಿಯದ ಜೋಡಿ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿದೆ. ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ 16ನೇ ಶ್ರೇಯಾಂಕದ ಭಾರತದ ಜೋಡಿ ಕೊರಿಯಾದ ಇನ್ನೊಂದು ಜೋಡಿ ಕೊ ಸಂಗ್ ಹಿಯುನ್ ಹಾಗೂ ಶಿನ್ ಬಯೆಕ್ ಚೆಯೊಲ್‌ರನ್ನು ಎದುರಿಸಲಿದೆ.

► ಪ್ರಣೀತ್ ಸವಾಲು ಅಂತ್ಯ

ಬಿ. ಸಾಯಿ ಪ್ರಣೀತ್ ನೇರ ಗೇಮ್‌ಗಳ ಅಂತರದಿಂದ ಸೋತು ನಿರ್ಗಮಿಸುವ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣೀತ್ ಜಪಾನ್‌ನ 7ನೇ ಶ್ರೇಯಾಂಕದ ಕೆಂಟಾ ಸುನೆಯಾಮಾ ವಿರುದ್ಧ 18-21, 12-21 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಇದೇ ವೇಳೆ, ಕನ್ನಡತಿ ಅಶ್ವಿನಿ ಪೊನ್ನಪ್ಪರೊಂದಿಗೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಆಡಿದ ರಾನಿಕ್‌ರೆಡ್ಡಿ ನೇರ ಗೇಮ್‌ಗಳಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದರು. ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ ಜೊತೆ ಸೆಮಿ ಫೈನಲ್‌ಗೆ ತಲುಪಿದ್ದ ರಾನಿಕ್‌ರೆಡ್ಡಿ, ಪೊನ್ನಪ್ಪ ಜೊತೆಗೂಡಿ ಕೇವಲ 28 ನಿಮಿಷಗಳಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ಯುಟಾ ವಟನಬೆ ಹಾಗೂ ಅರಿಸ ಹಿಗಾಶಿನೊ ವಿರುದ್ಧ 13-21, 15-21 ಗೇಮ್‌ಗಳಿಂದ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News