ಸರಕು ಸಾಗಾಟಕ್ಕೆ ಮಿತಿ: ದಂಡ ಅಧಿಕಾರಿಗಳನ್ನು ಭೇಟಿ ಮಾಡಿದ ಎಸ್ಡಿಟಿಯು ನಿಯೋಗ

Update: 2019-08-03 11:03 GMT

ಮಂಗಳೂರು : ಮೋಟಾರು ವಾಹನ ಕಾಯ್ದೆ ಪ್ರಕಾರ ಸರಕು ಸಾಗಾಟದ ಟೆಂಪೋ, ಪಿಕ್ ಅಪ್ ಮುಂತಾದ ವಾಹನಗಳಲ್ಲಿ ಇಪ್ಪತ್ತು ಅಡಿ ಉದ್ದದ ಸರಕು ಸಾಗಾಟಕ್ಕೆ ನಿರ್ಭಂದಿಸಿ ದಂಡ ವಿಧಿಸುತ್ತಿರುವ ಬಗ್ಗೆ ಎಸ್ಡಿಟಿಯು(ಟ್ರೇಡ್ ಯೂನಿಯನ್) ವತಿಯಿಂದ ಟೆಂಪೋ, ಪಿಕ್ ಅಪ್ ವಾಹನ ಚಾಲಕರ ಪರವಾಗಿ ಅಪರ ಜಿಲ್ಲಾದಿಕಾರಿ ಮತ್ತು ಟ್ರಾಫಿಕ್ ಡೆಪ್ಯುಟಿ ಕಮಿಷನರ್ ರವರನ್ನು ಭೇಟಿ ಮಾಡಿ ಲಿಖಿತ ಮನವಿ ಮಾಡಲಾಯಿತು.

ದಿನನಿತ್ಯ ಶ್ರಮವಹಿಸಿ ದುಡಿದ ಹಣದಿಂದ ಇತ್ತೀಚಿನ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಕಾನೂನಿಂದ ಸರಕು ಸಾಗಾಟದ ಚಾಲಕರಿಗೆ ದಂಡ ಕಟ್ಟಲು ಸಾದ್ಯವಾಗದೇ ಇರುವೂದರಿಂದ ಸರಕು ಸಾಗಾಟದ ಚಾಲಕರು ಸಂಕಷ್ಟ ಎದುರಿಸುತ್ತಿದ್ದು  ಈ ಬಗ್ಗೆ ಅಧಿಕಾರಿಗಳಿಗೆ  ಚಾಲಕರ ಸಂಕಷ್ಟದ ಬಗ್ಗೆ ಅಹವಾಲುಗಳನ್ನು ತಿಳಿಸಲಾಯಿತು.

ಎಸ್ಡಿಟಿಯು ಮಂಗಳೂರು ನಗರ ಸಂಚಾಲಕ ನೌಫಲ್ ಕುದ್ರೋಳಿ, ಎಸ್ಡಿಎಸಿಯು ಜಿಲ್ಲಾದ್ಯಕ್ಷ ಖಾದರ್ ಫರಂಗಿಪೇಟೆ, ರಮೀಝ್ ಪಾಂಡೇಶ್ವರ ಹಾಗೂ ಟೆಂಪೋ, ಪಿಕ್ ಅಪ್ ಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News