×
Ad

ಹಲವಾರು ಸ್ಟೀಲ್ ಕಂಪೆನಿಗಳು ಬಂದ್: 30 ಕಂಪೆನಿಗಳು ಮುಚ್ಚುವ ಹಂತದಲ್ಲಿ

Update: 2019-08-03 16:34 IST

#15 ದಿನ ಮಾತ್ರ ಉತ್ಪಾದನೆಯಲ್ಲಿ ತೊಡಗಿರುವ ಟಾಟಾ ಮೋಟಾರ್ಸ್

ಜಮ್ಶೆಡ್ ಪುರ, ಆ.3: ವಾಹನ ಮಾರಾಟ ಸಂಖ್ಯೆಯಲ್ಲಿ ಗಣನೀಯ ಕುಸಿತದಿಂದ ಆಟೋಮೊಬೈಲ್ ಕ್ಷೇತ್ರ ಬಹಳಷ್ಟು ಕಠಿಣ ಸಮಯ ಎದುರಿಸುತ್ತಿರುವಂತೆಯೇ ಗುರುವಾರದಿಂದೀಚೆಗೆ ಕನಿಷ್ಠ ಒಂದು ಡಝನ್ ಉಕ್ಕು ಕ್ಷೇತ್ರದ  ಕಂಪೆನಿಗಳು ಬಾಗಿಲು ಮುಚ್ಚಿವೆ. ಇನ್ನೂ 30 ಕಂಪೆನಿಗಳು ಮುಚ್ಚುವ ಹಂತದಲ್ಲಿವೆ. ಟಾಟಾ ಮೋಟಾರ್ಸ್ ಸಂಸ್ಥೆ ಕಳೆದೊಂದು ತಿಂಗಳಿನಿಂದ ಸರಣಿ ಬ್ಲಾಕ್ ಕ್ಲೋಷರ್ ಗಳಿಗೆ ಮೊರೆ ಹೋಗಿದೆ.

ಗುರುವಾರದಿಂದ ಶನಿವಾರದವರೆಗೆ ಟಾಟಾ ಮೋಟಾರ್ಸ್ ಕಳೆದ ತಿಂಗಳಿನಿಂದೀಚೆಗೆ ನಡೆಸುತ್ತಿರುವ ನಾಲ್ಕನೇ ಬ್ಲಾಕ್ ಕ್ಲೋಶರ್ ಆಗಿದೆ. ಸುಮಾರು 1000 ತಾತ್ಕಾಲಿಕ ಉದ್ಯೋಗಿಗಳಿಗೆ  ಆಗಸ್ಟ್ 12ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆಯಲ್ಲದೆ, ಖಾಯಂ ಉದ್ಯೋಗಿಗಳು ಆಗಸ್ಟ್ 5ರಂದು  ಕರ್ತವ್ಯಕ್ಕೆ  ಹಾಜರಾಗಲಿದ್ದಾರೆ.

ಕಳೆದೆರಡು ತಿಂಗಳುಗಳಿಂದ ಟಾಟಾ ಮೋಟಾರ್ಸ್ ತಿಂಗಳಿಗೆ ಕೇವಲ 15 ದಿನಗಳ ಕಾಲ ಉತ್ಪಾದನಾ ಕಾರ್ಯದಲ್ಲಿ ತೊಡಗಿದೆ. ಆಗಸ್ಟ್ ತಿಂಗಳಲ್ಲಿ ಕೇವಲ ಒಂದು ವಾರದ ಉತ್ಪಾದನಾ ಪ್ರಮಾಣಕ್ಕೆ ಮಾತ್ರ ಇಲ್ಲಿಯ ತನಕ ಕಂಪೆನಿಗೆ ಆರ್ಡರ್ ಲಭ್ಯವಾಗಿದೆ. ಇದರಿಂದಾಗಿ ಟಾಟಾ ಮೋಟಾರ್ಸ್ ಮೇಲೆ ಅವಲಂಬಿಸಿರುವ ಹಾಗೂ ಇಲ್ಲಿನ ಆದಿತ್ಯಾಪುರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಪೂರಕ ಉಪಕರಣಗಳನ್ನು ತಯಾರಿಸುವ ಸುಮಾರು 1000  ಸಂಸ್ಥೆಗಳೂ ಬಾಧಿತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News