ಎಸ್ಸೆಸ್ಸೆಫ್ ದ.ಕ ಜಿಲ್ಲೆಯನ್ನು ದ.ಕ ವೆಸ್ಟ್ - ದ.ಕ ಈಸ್ಟ್ ಆಗಿ ವಿಭಜನೆ

Update: 2019-08-03 12:12 GMT

ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ದ.ಕ ಜಿಲ್ಲಾ ಅರ್ಧ ವಾರ್ಷಿಕ ಕೌನ್ಸಿಲ್ ಸಭೆಯು ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ ಅರಿಯ್ಯ ವಿದ್ಯಾ ಸಂಸ್ಥೆ ಸುರಿಬೈಲಿನಲ್ಲಿ ನಡೆಯಿತು.

ಸಭೆಯನ್ನು ಅಶ್ ಅರಿಯ್ಯ  ಸಂಸ್ಥೆಯ ಮುಖ್ಯಸ್ಥರಾದ ಮುಹಮ್ಮದಲಿ ಸಖಾಫಿ ಉದ್ಘಾಟಿಸಿದರು.

ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ನಾಯಕ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ತರಗತಿ ನಡೆಸಿ ಚರ್ಚೆಗೆ ನೇತೃತ್ವ ಕೊಟ್ಟರು. ನಂತರ ದಕ ಜಿಲ್ಲೆಯಲ್ಲಿ ಸಂಘಟನಾ ಎಸ್ಸೆಸ್ಸೆಫಿನ  ಶಾಖೆಗಳು ಐನೂರರಷ್ಟಿದ್ದು ಅದನ್ನು ಎರಡು ವಿಭಾಗಗಳಾಗಿ ವಿಭಜಸಿ ಎಸ್ಸೆಸ್ಸೆಫ್ ದ.ಕ ಈಸ್ಟ್ ಮತ್ತು ದ.ಕ ವೆಸ್ಟ್ ಎಂದು ನಾಮಕರಣ ಮಾಡಲಾಯಿತು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಎರಡು ವಿಭಾಗಗಳಿಗೆ ಸಮಿತಿಯನ್ನು ಘೋಷಿಸಿದರು. ಸಭೆಯಲ್ಲಿ ಸುಪ್ರೀಂ ಕೌನ್ಸಿಲ್ ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಉಪಾಧ್ಯಕ್ಷ  ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ರವೂಫ್ ಖಾನ್ ಕುಂದಾಪುರ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಶ್ರಫ್ ರಝಾ ಅಂಜದಿ ಉಡುಪಿ ಹಾಗೂ ದಕ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ಶರೀಫ್ ನಂದಾವರ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News