×
Ad

ಅಳುತ್ತಿದೆ ಎಂದು ಒಂದು ವರ್ಷದ ಹಸುಳೆಯನ್ನು ಕೊಂದ ಕುಡುಕ ತಂದೆ

Update: 2019-08-03 19:41 IST

ಮುಂಬೈ, ಆ.3: ತನ್ನ ಒಂದು ವರ್ಷದ ಹೆಣ್ಣುಮಗು ಪದೇ ಪದೇ ಅಳುತ್ತದೆ ಎಂಬ ಕಾರಣಕ್ಕೆ ಕೆರಳಿದ ಕುಡುಕ ತಂದೆ ಉಸಿರುಗಟ್ಟಿಸಿ ಮಗುವನ್ನು ಕೊಂದ ಕ್ರೂರ ಘಟನೆ ಮಹಾರಾಷ್ಟ್ರದ ಲಾತೂರು ಜಿಲ್ಲೆಯ ನಿಲಂಗಾ ತಾಲೂಕಿನಲ್ಲಿ ಸಂಭವಿಸಿದೆ.

ಆರೋಪಿ ಶಿವಾಜಿ ಲಾಲೆ ಎಂಬಾತ ಹೋಟೆಲ್ ನಡೆಸುತ್ತಿದ್ದು,ಕಳೆದ ಕೆಲವು ವರ್ಷಗಳಿಂದ ಮದ್ಯಪಾನದ ಚಟವನ್ನು ಅಂಟಿಸಿಕೊಂಡಿದ್ದ. ಗುರುವಾರ ರಾತ್ರಿ ಮಗು ಪದೇ ಪದೇ ಅಳತೊಡಗಿದ್ದರಿಂದ ಸಿಟ್ಟಿಗೆದ್ದಿದ್ದ ಲಾಲೆ ಅದನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಪತ್ನಿಯ ದೂರಿನಂತೆ ಪೊಲೀಸರು ಲಾಲೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News