ಆಮದು ಸುಂಕದಲ್ಲಿ ಗಣನೀಯ ಏರಿಕೆ

Update: 2019-08-03 16:43 GMT

 ವಾಶಿಂಗ್ಟನ್, ಆ. 3: ಚೀನಾದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳು ನಿರೀಕ್ಷಿತ ರೀತಿಯಲ್ಲಿ ಸಾಗದಿದ್ದರೆ, ಆ ದೇಶದಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಗಣನೀಯ ಪ್ರಮಾಣದ ಆಮದು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

‘‘ಇದನ್ನು ನಿವಾರಿಸಬೇಕಾದರೆ ಚೀನಾ ತುಂಬಾ ಕೆಲಸ ಮಾಡಬೇಕು. ಸೆಪ್ಟಂಬರ್ 1ರಂದು ಹೊಸ ಆಮದು ತೆರಿಗೆ ಜಾರಿಗೆ ಬರುತ್ತದೆ’’ ಎಂದು ಟ್ರಂಪ್ ಹೇಳಿದರು.

ಚೀನಾದ 300 ಬಿಲಿಯ ಡಾಲರ್ (ಸುಮಾರು 21 ಲಕ್ಷ ಕೋಟಿ ರೂಪಾಯಿ) ಸರಕಿನ ಮೇಲೆ 10 ಶೇಕಡ ಆಮದು ಸುಂಕವನ್ನು ಘೋಷಿಸಿದ ಒಂದು ದಿನದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಇದು 250 ಬಿಲಿಯ ಡಾಲರ್ (ಸುಮಾರು 17.42 ಲಕ್ಷ ಕೋಟಿ ರೂಪಾಯಿ) ಚೀನಾ ಉತ್ಪನ್ನಗಳ ಮೇಲೆ ಅಮೆರಿಕ ಈಗಾಗಲೇ ವಿಧಿಸಿರುವ 25 ಶೇಕಡ ಆಮದು ಸುಂಕಕ್ಕೆ ಹೆಚ್ಚುವರಿಯಾಗಿದೆ.

ಚೀನಾ ಮತ್ತು ಅಮೆರಿಕಗಳ ನಡುವಿನ ಮುಂದಿನ ಸುತ್ತಿನ ವ್ಯಾಪಾರ ಮಾತುಕತೆಗಳು ಸೆಪ್ಟಂಬರ್‌ನಲ್ಲಿ ನಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News