72 ವರ್ಷ ಬಳಿಕ ಗುರುದ್ವಾರವನ್ನು ಸಿಖ್ ಭಕ್ತರಿಗೆ ತೆರೆದ ಪಾಕ್

Update: 2019-08-03 16:46 GMT

ಲಾಹೋರ್, ಆ. 3: ದೇಶ ವಿಭಜನೆಯಾದ 72 ವರ್ಷಗಳ ಬಳಿಕ, ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿರುವ ಐತಿಹಾಸಿಕ ಗುರುದ್ವಾರ ಚೋವಾ ಸಾಹಿಬ್‌ನ ಬಾಗಿಲನ್ನು ಆ ದೇಶ ಶುಕ್ರವಾರ ಸಿಖ್ ಭಕ್ತರಿಗೆ ತೆರೆದಿದೆ.

ನವೆಂಬರ್‌ನಲ್ಲಿ ನಡೆಯಲಿರುವ ಗುರು ನಾನಕ್ ದೇವ್‌ರ 550ನೇ ಜನ್ಮ ದಿನಕ್ಕೆ ಪೂರ್ವಭಾವಿಯಾಗಿ, ಭಾರತ ಸೇರಿದಂತೆ ಎಲ್ಲೆಡೆಯ ಸಿಖ್ಖರಿಗೆ ಗುರುದ್ವಾರದ ಬಾಗಿಲನ್ನು ಪಾಕಿಸ್ತಾನ ತೆರೆದಿದೆ.

1947ರ ವಿಭಜನೆಯ ವೇಳೆ, ಈ ಪ್ರದೇಶದ ಸಿಖ್ ಸಮುದಾಯ ಭಾರತಕ್ಕೆ ವಲಸೆ ಬಂದ ಬಳಿಕ ಪಂಜಾಬ್ ರಾಜ್ಯದ ಝೀಲಮ್ ಜಿಲ್ಲೆಯಲ್ಲಿರುವ ಗುರುದ್ವಾರ ಮುಚ್ಚಿತ್ತು.

ಶುಕ್ರವಾರ ಉನ್ನತ ಅಧಿಕಾರಿಗಳು ಮತ್ತು ಸಮುದಾಯ ಸದಸ್ಯರ ಸಮ್ಮುಖದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಗುರುದ್ವಾರ ಚೋವಾ ಸಾಹಿಬ್‌ನ ಬಾಗಿಲು ತೆರೆಯಲಾಯಿತು.

ಗುರುದ್ವಾರದ ಜೀರ್ಣೋದ್ಧಾರ ಕಾರ್ಯ ಚಾಲ್ತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News