ಸುಡಾನ್: ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಅಸ್ತು
Update: 2019-08-03 22:22 IST
ಕೈರೋ, ಆ. 3: ಸುಡಾನ್‌ನ ಪ್ರಜಾಪ್ರಭುತ್ವ ಪರ ಚಳವಳಿಯ ನಾಯಕತ್ವ ಮತ್ತು ಆಡಳಿತಾರೂಢ ಸೇನಾ ಮಂಡಳಿಯು ಅಧಿಕಾರ ಹಂಚಿಕೆ ಒಪ್ಪಂದವೊಂದನ್ನು ಅಂತಿಮಗೊಳಿಸಿವೆ ಎಂದು ಸುಡಾನ್‌ಗೆ ಆಫ್ರಿಕ ಒಕ್ಕೂಟದ ಪ್ರತಿನಿಧಿ ಮುಹಮ್ಮದ್ ಅಲ್-ಹಸನ್ ಲೆಬಟ್ ಶನಿವಾರ ತಿಳಿಸಿದರು.
ಚುನಾವಣೆ ನಡೆಯುವ ಮುನ್ನ ಮೂರು ವರ್ಷಗಳ ಸಂಕ್ರಮಣ ಅವಧಿಯಲ್ಲಿ ಅಧಿಕಾರವನ್ನು ವಿಭಜಿಸುವ ಸಾಂವಿಧಾನಿಕ ಘೋಷಣೆಗೆ ಉಭಯ ತಂಡಗಳು ‘ಸಂಪೂರ್ಣ ಒಪ್ಪಿಗೆ ನೀಡಿವೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೆಬಟ್ ಹೇಳಿದರು.
ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.