ಶ್ರೀನಿವಾಸ್ ವಿವಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ಪ್ರವೇಶೋತ್ಸವ

Update: 2019-08-04 06:00 GMT

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ಕಾಲೇಜಿಗೆ ಹೊಸದಾಗಿ 2019-2020ರ ಸಾಲಿಗೆ ಸೇರ್ಪಡೆಯಾದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಂಭ್ರಮವು ನಗರದ ಜಿ.ಎಚ್.ರಸ್ತೆಯ ಶ್ರೀನಿವಾಸ್ ಕನ್ವೆನ್‍ಷನ್ ಹಾಲ್‍ನಲ್ಲಿ ನಡೆಯಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸಿಎ.ಎ. ರಾಘವೇಂದ್ರರಾವ್‍ ನೂತನವಾಗಿ ಆಯ್ಕೆಯಾದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತಂಡಕ್ಕೆ ಶುಭ ಹಾರೈಸುತ್ತಾ, ಶ್ರೀನಿವಾಸ ಶಿಕ್ಷಣ ಸಂಸ್ಥೆ ಕಳೆದ 3 ದಶಕಗಳಿಗೂ ಅಧಿಕ ವರ್ಷಗಳಿಂದ ವಿಶ್ವದರ್ಜೆಯ ಶಿಕ್ಷಣವನ್ನು ನೀಡುತ್ತಿದ್ದು, ವಿಶ್ವದಾದ್ಯಂತ ನಮ್ಮ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಿದ್ದು, ಅಂತಹ ಸಂಸ್ಥೆಗೆ ನೀವು ಸೇರಿದ್ದೀರಿ. ನಿಮ್ಮ ಜವಾಬ್ದಾರಿ ಹೆಚ್ಚಿದೆ. ಅದೇ ಮಟ್ಟವನ್ನು ಕಾಯ್ದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಹೆತ್ತವರು ಸಹಕರಿಸಬೇಕೆಂದರು.

ಶ್ರೀನಿವಾಸ್ ವಿ.ವಿ.ಯ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್‍  ನೂತನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಕಠಿಣಪರಿಶ್ರಮ ಸಾಧನೆಯ ಮೆಟ್ಟಿಲು, ಕಳೆದ 25ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಫಿಸಿಯೋಥೆರಫಿ ಶಿಕ್ಷಣ ನೀಡುತ್ತಿರುವ ಶ್ರೀನಿವಾಸ್ ಸಂಸ್ಥೆ ವಿಶ್ವಮಟ್ಟದಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದು, ಅದೇ ಶೈಕ್ಷಣಿಕ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ನಮ್ಮ ಶಿಕ್ಷಕವೃಂದ ಪಣತೊಟ್ಟು ನಿಂತಿದೆ. ಇಂತಹ ಸಂಸ್ಥೆಗೆ ಸೇರಿದ ನೀವು ಅದೃಷ್ಟವಂತರು ಎಂದರು.

ಎ.ಶ್ಯಾಮರಾವ್ ಪೌಂಡೇಷನ್‍ನ ನಿರ್ದೇಶಕರಾದ ವಿಜಯಲಕ್ಷ್ಮಿರಾವ್, ಪೌಂಡೇಶನ್‍ನ ಕಾರ್ಯದರ್ಶಿಗಳಾದ ಮಿತ್ರಾ ಎಸ್. ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭಕೋರಿದರು. ಕಾಲೇಜಿನ ಡೀನ್ ಡಾ. ರಾಜಶೇಖರ್ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಆಭಿವೃದ್ಧಿ) ಡಾ. ಅಜಯ್ ಕುಮಾರ್ ವಿದ್ಯಾರ್ಥಿಗಳಿಗೆ ಫಿಸಿಯೋಥೆರಫಿ ಕೋರ್ಸ್‍ನ ಬಗ್ಗೆ ವಿವಿಧ ಉಪಯುಕ್ತ ಮಾಹಿತಿ ನೀಡಿ ಹುರಿದುಂಬಿಸಿದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ. ತ್ರಿಶಾಲಾ ನೊರ್ಹೊನ್ಹಾ ಕಾರ್ಯಕ್ರಮವನ್ನು ಸಂಯೋಜಿಸಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಮಗೇಶ್ವರನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News