ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; 9 ಸಾವು

Update: 2019-08-04 16:07 GMT

  ಐಟನ್ (ಒಹಿಯೊ),ಆ. 4: ಅಮೆರಿಕದ ಒಹಿಯೊ ರಾಜ್ಯದ ಒರೆಗಾನ್ ಜಿಲ್ಲೆಯ ಡೇಟನ್‌ನಗರದಕೇಂದ್ರಭಾಗದಲ್ಲಿ ಬಂಧೂಕುದಾರಿಯೊಬ್ಬ, ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂದೂಕುಧಾರಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

 ಸ್ಥಳೀಯ ಕಾಲಮಾನ ಶುಕ್ರವಾರ ಕಳೆದು ಶನಿವಾರ ಮಧ್ಯರಾತ್ರಿ ಸುಮಾರು 1:00 ಗಂಟೆಯ ವಳೆಗೆ ಶೂಟೌಟ್‌ನಲ್ಲಿ ಗಾಯಗೊಂಡ 16 ಮಂದಿಯನ್ನು ಮಿಯಾಮಿ ವ್ಯಾಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ಬೆನ್ನಲ್ಲೇ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯನ್ನು ಮೇಯರ್ ನ್ಯಾನ್ ವಾಲೆ ಪ್ರಶಂಸಿಸಿದ್ದಾರೆ. ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯು ಹಲವಾರು ಜೀವಗಳನ್ನು ಉಳಿಸಲು ಸಫಲವಾಯಿತೆಂದು ಅವರು ಹೇಳಿದ್ದಾರೆ.

ಡೇಟೌನ್ ನಗರವು ಉಪಾಹಾರಗೃಹಗಳು ಥಿಯೇಟರ್‌ಗಳು ಸೇರಿದಂತೆ ವಿವಿಧ ಮನರಂಜನಾತಾಣವಾಗಿದೆ. ಟೆಕ್ಸಾಸ್‌ನ ಎಲ್‌ಪಾಸ್ಸೊ ನಗರದಲ್ಲಿ ಯುವಕನೊಬ್ಬ ವಾಲ್‌ಮಾರ್ಟ್ ಮಳಿಗೆಯಲ್ಲಿ ಗುಂಡು ಹಾರಾಟ ನಡೆಸಿ 20 ಮಂದಿಯನ್ನು ಹತ್ಯೆಗೈದ ಕೆಲವೇ ತಾಸುಗಳ ಬಳಿಕ ಡೇಟನ್‌ನಗಲ್ಲಿ ಶೂಟೌಟ್ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News