ಜಪಾನ್‌ನಲ್ಲಿ ಪ್ರಬಲ ಭೂಕಂಪ

Update: 2019-08-04 16:09 GMT

 ಟೋಕಿಯೊ,ಆ.4:ಈಶಾನ್ಯ ಜಪಾನ್‌ನಲ್ಲಿ ರವಿವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದ ಕೇಂದ್ರಬಿಂದು ಈಶಾನ್ಯ ಜಪಾನ್‌ನ ಕರಾವಳಿಯಿಂದ 50 ಕಿ.ಮೀ. ದೂರದ ಸಾಗರಾದಳದಲ್ಲಿತ್ತೆಂದು ಜಪಾನ್‌ನ ಹವಾಮಾನಶಾಸ್ತ್ರ ಇಲಾಖೆ ತಿಳಿಸಿದೆ.

 ಆದರೆ ಭೂಕಂಪದಿಂದಾಗಿ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿಲ್ಲವೆಂದು ಅದು ಹೇಳಿದೆ. ಭೂಕಂಪದಿಂದಾಗಿ ಪುಕುಶಿಮಾ ಹಾಗೂ ಮಿಯಾಗಿ ಪ್ರಾಂತಗಳು ಸೇರಿದಂತೆ ಈಶಾನ್ಯ ಜಪಾನ್‌ನ ಹಲವೆಡೆ ಭೂಮಿ ನಡುಗಿದ ಅನಭವವಾಗಿದ್ದು ಜನರು ಭಯಭೀತಗೊಂಡಿದ್ದಾರೆ.

      ಭೂಕಂಪದ ಬಳಿಕ ಜನಪಯೋಗಿ ಇಲಾಖೆಗಳ ಅಧಿಕಾರಿಗಳು ಪ್ರದೇಶದಲ್ಲಿ ಅಣುಕ್ತಿ ಸ್ಥಾವರಗಳ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಿದರು. 2011ರಲ್ಲಿ ಫುಕುಶಿಮಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸೃಷ್ಯಿಯಾದ ಸುನಾಮಿ ಅಲೆಗಳು ಅಣುಸ್ಥಾರದ ಮೇಲೆ ಅಪ್ಪಳಿಸಿದ್ದರಿಂದ ವಿಕಿರಣ ಸೋರಿಕೆಯಾಗಿ, ಭಾರೀ ದುರಂತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News