ಕ್ಷಿಪ್ರ ಪ್ರತಿಕ್ರಿಯೆ ಕ್ಷಿಪಣಿ ಪರೀಕ್ಷೆ ಯಶಸ್ವಿ

Update: 2019-08-04 17:43 GMT

 ಬಾಲಸೋರ್, ಆ.4: ಎಲ್ಲಾ ಭೂಪ್ರದೇಶದಲ್ಲೂ ಕಾರ್ಯನಿರ್ವಹಿಸಬಲ್ಲ,  ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಅತ್ಯಾಧುನಿಕ ಕ್ವಿಕ್ ರಿಯಾಕ್ಷನ್ (ಕ್ಷಿಪ್ರ ಪ್ರತಿಕ್ರಿಯೆ) ಕ್ಷಿಪಣಿಯ ಪರೀಕ್ಷೆಯನ್ನು ರವಿವಾರ ಒಡಿಶಾದ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ನಡೆಸಲಾಗಿದೆ.

ಅತ್ಯಾಧುನಿಕ ಆವಿಷ್ಕಾರದಿಂದ ಕೂಡಿದ ಈ ಕ್ಷಿಪಣಿಯನ್ನು ಸೇನಾಪಡೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಒಡಿಶಾದ ಚಾಂಡಿಪುರ ಎಂಬಲ್ಲಿರುವ ಸಂಯೋಜಿತ ಪರೀಕ್ಷಾ ಕೇಂದ್ರದಲ್ಲಿ ಸಂಚಾರಿ ಉಡಾಹಕದಿಂದ ರವಿವಾರ ಬೆಳಿಗ್ಗೆ 11.05 ಗಂಟೆಗೆ ಕ್ಷಿಪಣಿಯನ್ನು ಉಡಾಯಿಸಲಾಯಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ. 25ರಿಂದ 30 ಕಿ.ಮೀ ಎತ್ತರಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಟ್ರಕ್ ಮೇಲಿಂದ ಉಡಾಯಿಸಬಹುದು. ವಿಮಾನದ ರೇಡಾರ್‌ಗಳಿಂದ ನುಣುಚಿ ಸಾಗುವ ಇಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಈ ಕ್ಷಿಪಣಿಯನ್ನು ಸಜ್ಜುಗೊಳಿಸಲಾಗಿದೆ.

 ಈ ಕ್ಷಿಪಣಿಯನ್ನು 2017ರ ಜೂನ್ 4ರಂದು ಮೊದಲ ಬಾರಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ 2019ರ ಫೆಬ್ರವರಿ 26ರಂದು ಒಂದೇ ದಿನ ಎರಡು ಪ್ರತ್ಯೇಕ ಪರಿಸ್ಥಿತಿಯಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News