370ನೆ ವಿಧಿ ರದ್ದು: ಸಂವಿಧಾನದ ಪ್ರತಿ ಹರಿದ ಪಿಡಿಪಿ ಸಂಸದ

Update: 2019-08-05 13:03 GMT

ಹೊಸದಿಲ್ಲಿ, ಆ.5: ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ನಂತರ ಪಿಡಿಪಿ ನಾಯಕ ಮೀರ್ ಮುಹಮ್ಮದ್ ಫಯಾಝ್ ಸಂವಿಧಾನದ ಪ್ರತಿಗಳನ್ನು ಹರಿದು ಹಾಕಿದ್ದಾರೆ. ಫಯಾಝ್ ರ ಈ ವರ್ತನೆಗಾಗಿ ಕೂಡಲೇ ರಾಜ್ಯಸಭೆಯಿಂದ ನಿರ್ಗಮಿಸುವಂತೆ ಸೂಚಿಸಲಾಯಿತು.

ಅಮಿತ್ ಶಾ ಮಾತನಾಡಿದ ನಂತರ ಪಿಡಿಪಿ ಸಂಸದರಾದ ನಝೀರ್ ಅಹ್ಮದ್ ಲವಾಯ್ ಮತ್ತು ಎಂಎಂ ಫಯಾಝ್ ಸಂಸತ್ತಿನ ಹೊರಭಾಗದಲ್ಲಿ ಪ್ರತಿಭಟಿಸಲು ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News