ಐತಿಹಾಸಿಕ ತಪ್ಪನ್ನು ಸರಿಪಡಿಸಲಾಗಿದೆ: ಅರುಣ್ ಜೇಟ್ಲಿ

Update: 2019-08-05 14:14 GMT

ಹೊಸದಿಲ್ಲಿ, ಆ.5: ಐತಿಹಾಸಿಕ ತಪ್ಪೊಂದನ್ನು ಇಂದು ಸರಿಪಡಿಸಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಿಗೆ ಅಭಿನಂದನೆಗಳು ಎಂದು ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

370ನೆ ವಿಧಿಯ ರದ್ದತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವು ತಾತ್ಕಾಲಿಕವಾಗಿತ್ತು ಮತ್ತು ಅದನ್ನು ಶಾಶ್ವತ ಎಂದು ಪರಿಗಣಿಸುವಂತಿಲ್ಲ. ಅದು ತೊಲಗಲೇಬೇಕಿತ್ತು. ಸರಕಾರದ ನಿರ್ಧಾರದಿಂದ ಅತ್ಯಂತ ಹೆಚ್ಚಿನ ಲಾಭವಾಗುವುದು ಜಮ್ಮು-ಕಾಶ್ಮೀರದ ನಿವಾಸಿಗಳಿಗೇ. ಹೆಚ್ಚಿನ ಹೂಡಿಕೆ,ಹೆಚ್ಚಿನ ಕೈಗಾರಿಕೆಗಳು,ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು,ಹೆಚ್ಚು ಉದ್ಯೋಗಗಳು ಮತ್ತು ಹೆಚ್ಚು ಆದಾಯ ಇವುಗಳಿಗೆ ರಾಜ್ಯವು ತೆರೆದುಕೊಳ್ಳಲಿದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News