370ನೆ ವಿಧಿ ರದ್ದು: ಇದು 1975ರ ತುರ್ತುಸ್ಥಿತಿ ಹೇರಿಕೆಯಂತೆ; ರಾಮಚಂದ್ರ ಗುಹಾ

Update: 2019-08-05 14:17 GMT

ಹೊಸದಿಲ್ಲಿ, ಆ.5: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ವಿಧಿ 370ನ್ನು ರದ್ದುಗೊಳಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೊರಡಿಸಿರುವ ಸುಗ್ರೀವಾಜ್ಞೆಗೂ 1975ರಲ್ಲಿ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಸ್ಥಿತಿಯನ್ನು ಘೋಷಿಸಿ ಹೊರಡಿಸಿದ್ದ ಸುಗ್ರೀವಾಜ್ಞೆಗೂ ವ್ಯತ್ಯಾಸವಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ಇದು ಪ್ರಜಾಪ್ರಭುತ್ವವಲ್ಲ. ಇದು ಸರ್ವಾಧಿಕಾರ. ಇದು ಸಂಸತ್ತಿನ ಒಳಗೆ ಅಥವಾ ಹೊರಗೆ ಸೂಕ್ತ ಚರ್ಚೆಯನ್ನೂ ನಡೆಸಲು ಧೈರ್ಯವಿಲ್ಲದ ಮಾನಸಿಕ ವಿಭ್ರಾಂತರ ಮತ್ತು ಅಭದ್ರ ಆಡಳಿತಗಾರರ ಹುನ್ನಾರವಾಗಿದೆ ಎಂದವರು ಹೇಳಿದರು.

ಜಮ್ಮು-ಕಾಶ್ಮೀರ ಮತ್ತು ಅದರ ಜನತೆಯ ಮೇಲೆ ಪರಿಣಾಮನ್ನುಂಟು ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಇಡೀ ರಾಜ್ಯವನ್ನೇ ಮುಚ್ಚಿದ್ದರ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿರಿಸಿದ್ದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News