370ನೆ ವಿಧಿ ರದ್ದತಿ ಅಸಾಂವಿಧಾನಿಕ: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್

Update: 2019-08-05 14:25 GMT

ಹೊಸದಿಲ್ಲಿ, ಆ.5: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೆ ವಿಧಿಯ ರದ್ದತಿ ಅಸಾಂವಿಧಾನಿಕ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಜಮ್ಮು-ಕಾಶ್ಮೀರವನ್ನು ವಿಭಜಿಸಲು ರಾಜ್ಯದ ಚುನಾಯಿತ ವಿಧಾನಸಭೆಯ ಒಪ್ಪಿಗೆ ಅಗತ್ಯವಾಗಿದೆ. ರಾಜ್ಯದಲ್ಲಿ ಕೇಂದ್ರವು ನಿರ್ವಹಿಸಬಹುದಾದ ವಿಷಯಗಳಿಗೆ ವಿಧಿ 370ರ ಮೂಲಕ ಯಾವುದೇ ತಿದ್ದುಪಡಿಗೆ ಅಥವಾ ರದ್ದತಿಗೂ ವಿಧಾನಸಭೆಯ ಅನುಮತಿ ಅಗತ್ಯವಾಗಿದೆ. ಕೇವಲ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಒಪ್ಪಿಗೆಯಿಂದ ಇದನ್ನು ಮಾಡಲು ಸಾಧ್ಯವಿಲ್ಲ. ಇದು ಸಂಪೂರ್ಣ ಸಂವಿಧಾನ ಬಾಹಿರವಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News