ಇನ್ನೊಂದು ಫೆಲೆಸ್ತೀನ್ ಸೃಷ್ಟಿಸುವ ಕ್ರಮವಿದು: ಆರ್ ಜೆಡಿ ಸಂಸದ ಮನೋಜ್ ಝಾ

Update: 2019-08-05 14:24 GMT

ಹೊಸದಿಲ್ಲಿ, ಆ.5: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಅತ್ಯಂತ ಕಟುವಾಗಿ ವಿರೋಧಿಸಿರುವ ಆರ್ ಜೆಡಿ ಸಂಸದ ಪ್ರೊ. ಮನೋಜ್ ಝಾ, ಈ ಕ್ರಮದ ಮೂಲಕ ಕೇಂದ್ರ ಸರಕಾರ ಕಾಶ್ಮೀರವನ್ನು ಇನ್ನೊಂದು ಫೆಲೆಸ್ತೀನ್ ಮಾಡುವ ದಾರಿ ತೆರೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿ ಇಂದಿರಾ ಗಾಂಧಿ ಹಾಗು ಜವಾಹರ್ ಲಾಲ್ ನೆಹರೂ ಅವರಿಗೆ ಜಯಪ್ರಕಾಶ್ ನಾರಾಯಣ್ ಅವರು ಬರೆದ ಪತ್ರವನ್ನು ಉಲ್ಲೇಖಿಸಿದ ಮನೋಜ್ ಝಾ ಅವರು ಕೇಂದ್ರದ ಕ್ರಮ ಸಾಂವಿಧಾನಿಕ ಇತಿಹಾಸದ ಹತ್ಯೆಯಾಗಿದೆ ಎಂದು ಟೀಕಾ ಪ್ರಹಾರ ಮಾಡಿದರು. 

"ದಯವಿಟ್ಟು ನಿಮ್ಮ ಅಹಂಕಾರ ಬಿಟ್ಟು ಬಿಡಿ ಮತ್ತು ಕಾಶ್ಮೀರಿಗಳನ್ನು ಆಲಂಗಿಸಿ. ಈ ಸದನದಲ್ಲಿ ಸರಕಾರವನ್ನು ಕೆಲವರು ಎಚ್ಚರಿಸಿದ್ದರು ಎಂದು ಐದು ವರ್ಷಗಳ ಬಳಿಕ ನೆನಪಿಸಲಾಗುತ್ತದೆ” ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News