ಇನ್ನಿಬ್ಬರು ಐಎನ್‌ಎಲ್‌ಡಿ ಶಾಸಕರು, ಸ್ವತಂತ್ರ ಶಾಸಕ ಬಿಜೆಪಿಗೆ ಸೇರ್ಪಡೆ

Update: 2019-08-05 17:44 GMT

ಚಂಡಿಗಢ, ಆ. 5: ಹರ್ಯಾಣದಲ್ಲಿ ಸೋಮವಾರ ಐಎನ್‌ಎಲ್‌ಡಿ (ಇಂಡಿಯನ್ ನ್ಯಾಶನಲ್ ಲೋಕ್ ದಳ್)ನ ಇಬ್ಬರು ಶಾಸಕರು ಹಾಗೂ ಓರ್ವ ಸ್ವತಂತ್ರ ಶಾಸಕ ಬಿಜೆಪಿಗೆ ಸೇರಿದ್ದಾರೆ.

 ಇದರಿಂದ ವಿಧಾನ ಸಭೆ ಚುನಾವಣೆ ನಡೆಯಲಿರುವ ಹರ್ಯಾಣದಲ್ಲಿ ಐಎನ್‌ಎಲ್‌ಡಿಗೆ ಇನ್ನೊಂದು ಹಿನ್ನಡೆ ಉಂಟಾಗಿದೆ. ಪಕ್ಷಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ರಾನಿಯಾ ವಿಧಾನಸಭಾ ಕ್ಷೇತ್ರದ ಐಎನ್‌ಎಲ್‌ಡಿ ಶಾಸಕ ರಾಮ್ ಚಂದರ್ ಕಂಬೋಜ್ ಹಾಗೂ ಫಿರೋಝ್‌ಪುರ ಝಿರ್ಕಾದ ಶಾಸಕ ನಸೀಮ್ ಅಹ್ಮದ್ ಇಂದು ಬಿಜೆಪಿಗೆ ಸೇರಿದರು. ಸಫಿದೋನ್ ಕ್ಷೇತ್ರದ ಸ್ವತಂತ್ರ ಶಾಸಕ ಜಸ್ಬೀರ್ ದೇಸ್ವಾಲ್ ಕೂಡ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಬಿಜೆಪಿಯ ರಾಜ್ಯ ಘಟಕದ ವರಿಷ್ಠನ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

 ಕೆಲವು ದಿನಗಳ ಹಿಂದೆ ಹರ್ಯಾಣದ ಮಾಜಿ ಸಚಿವ ಜಗದೀಶ್ ಯಾದವ್ ಜೊತೆಗೆ ರಾತಿಯಾದ ಐಎನ್‌ಎಲ್‌ಡಿ ಶಾಸಕ ರವೀಂದರ್ ಬಲಿಯಾಲ ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News