ಎಟಿಪಿ ರ‍್ಯಾಂಕಿಂಗ್: ಮೊದಲ ಬಾರಿ ಅಗ್ರ-5 ಸ್ಥಾನಕ್ಕೇರಿದ ಸಿಟ್‌ಸಿಪಾಸ್

Update: 2019-08-05 18:24 GMT

ಪ್ಯಾರಿಸ್, ಆ.5: ವಾಶಿಂಗ್ಟನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಸ್ಟೆಫನೊಸ್ ಸಿಟ್‌ಸಿಪಾಸ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ‍್ಯಾಂಕಿಂಗ್ನಲ್ಲಿ ಮೊತ್ತ ಮೊದಲ ಬಾರಿ ಅಗ್ರ-5ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

20ರ ಹರೆಯದ ಗ್ರೀಕ್ ಆಟಗಾರ ಸಿಟ್‌ಸಿಪಾಸ್ ಈಗಾಗಲೇ ಮಾರ್ಸೆಲ್ಲಿ ಹಾಗೂ ಎಸ್ಟ್ರೋಲ್ ಟೂರ್ನಮೆಂಟ್‌ನಲ್ಲಿ ಜಯ ಸಾಧಿಸಿದ್ದು, ಮ್ಯಾಡ್ರಿಡ್‌ನಲ್ಲಿ ನಡೆದಿದ್ದ ಮಾಸ್ಟರ್ಸ್-1000 ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅಗ್ರ-20ರಲ್ಲಿ ಸ್ಥಾನ ಪಡೆದಿರುವ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.

  ಸಿಟ್‌ಸಿಪಾಸ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಹಿಂದಿಕ್ಕಿದ್ದಾರೆ. ಝ್ವೆರೆವ್ 2 ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಿಟ್‌ಸಿಪಾಸ್ ಅಗ್ರ-5ರಲ್ಲಿ ಹೆಚ್ಚು ಸಮಯ ಉಳಿಯುವ ಸಾಧ್ಯತೆಯಿಲ್ಲ. ಈ ವಾರ ಮಾಂಟ್ರಿಯಲ್ ಮಾಸ್ಟರ್ಸ್ ಟೂರ್ನಿಯ ನಡೆಯುವುದು. ಆರನೇ ಸ್ಥಾನದಲ್ಲಿರುವ ಕೀ ನಿಶಿಕೊರಿ, ಸಿಟ್‌ಸಿಪಾಸ್‌ಗಿಂತ ಕೇವಲ ಐದು ಅಂಕ ಹಿಂದಿದ್ದಾರೆ. ನೊವಾಕ್ ಜೊಕೊವಿಕ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ವಾಶಿಂಗ್ಟನ್ ಓಪನ್ ಫೈನಲ್‌ನಲ್ಲಿ ಡೇನಿಲ್ ಮೆಡ್ವೆಡೆವ್‌ರನ್ನು ಮಣಿಸಿರುವ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಈ ವಾರ ಭಾರೀ ಭಡ್ತಿ ಪಡೆದಿದ್ದಾರೆ. 27ನೇ ಸ್ಥಾನಕ್ಕೇರಿದ್ದಾರೆ.

ಎಟಿಪಿ ರ‍್ಯಾಂಕಿಂಗ್

►1. ನೊವಾಕ್ ಜೊಕೊವಿಕ್

     (ಸರ್ಬಿಯ)

►2. ರಫೆಲ್ ನಡಾಲ್(ಸ್ಪೇನ್)

►3. ರೋಜರ್ ಫೆಡರರ್(ಸ್ವಿಸ್)

►4. ಡೊಮಿನಿಕ್ ಥೀಮ್(ಆಸ್ಟ್ರೀಯ)

►5. ಸ್ಟೆಫನೊಸ್ ಸಿಟ್‌ಸಿಪಾಸ್(ಗ್ರೀಕ್)

►6. ಕಿ ನಿಶಿಕೊರಿ(ಜಪಾನ್)

►7.ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)

►8. ಕರೆನ್ ಖಚನೊವ್(ರಶ್ಯ)

►9. ಡಾನಿಲ್ ಮೆಡ್ವೆಡೆವ್(ರಶ್ಯ)

►10.ಕೆವಿನ್ ಆ್ಯಂಡರ್ಸನ್(ದ.ಆಫ್ರಿಕ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News