ಕೋಮಾದಲ್ಲಿದ್ದ ರೋಗಿಯ ಪಾದವನ್ನೇ ಕಚ್ಚಿ ತಿಂದ ಇಲಿಗಳು!

Update: 2019-08-06 10:39 GMT
Photo: indiatoday.in

ಭೋಪಾಲ್, ಆ.6: ಮಧ್ಯ ಪ್ರದೇಶದ ರತ್ಲಂ ಎಂಬಲ್ಲಿನ ಜಿಲ್ಲಾ  ಸರಕಾರಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ರೋಗಿಯ ಬಲ ಪಾದವನ್ನು ಇಲಿಗಳು ಕಚ್ಚಿ ತಿಂದ ಘಟನೆ ವರದಿಯಾಗಿದೆ.

ಸೂರಜ್ ಭಟ್ಟಿ ಎಂಬ ಹೆಸರಿನ ವ್ಯಕ್ತಿ ಕಳೆದ ಹಲವು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಕುಟುಂಬ ಕೋಮಾದಲ್ಲಿರುವ ಆತ ಶೀಘ್ರ ಗುಣಮುಖನಾಗಲೆಂದು ಬಯಸುತ್ತಿದ್ದ ಸಂದರ್ಭ ಈ ಆಘಾತಕಾರಿ ಘಟನೆ ನಡೆದಿದೆ.

ಸೂರಜ್ ನ ತಂದೆ ಆತನನ್ನು ನೋಡಲೆಂದು ಸೋಮವಾರ ಆಸ್ಪತ್ರೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಮಗನ ಹಾಸಿಗೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ಅವರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬಲ ಪಾದದಲ್ಲಿ ರಕ್ತ ಒಸರುತ್ತಿರುವುದನ್ನು ಕಂಡರು. ಕೂಡಲೇ ಆವರು ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ರಾತ್ರಿ ಹೊತ್ತು ಇಲಿ ಕಚ್ಚಿರಬೇಕೆಂದು ಅವರೆಲ್ಲರೂ ಅಂದಾಜಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದೆಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರಲ್ಲದೆ ಇಲಿಗಳ ಕಾಟ ನಿಯಂತ್ರಿಸಲೂ ಯತ್ನಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News