ಲಡಾಖ್‌ಗೆ ಕೇಂದ್ರಾಡಳಿತ ಸ್ಥಾನಮಾನ ಸ್ವಾಗತಿಸಿದ ವಿಕ್ರಮೆಸಿಂಘೆ

Update: 2019-08-06 16:04 GMT

ಕೊಲಂಬೊ, ಆ. 6: ಬೌದ್ಧ ಬಹುಸಂಖ್ಯಾತ ವಲಯವಾಗಿರುವ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿರುವ ಭಾರತ ಸರಕಾರದ ನಿರ್ಧಾರವನ್ನು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮೆಸಿಂೆ ಮಂಗಳವಾರ ಸ್ವಾಗತಿಸಿದ್ದಾರೆ.

‘‘ಲಡಾಖ್ ಅಂತಿಮವಾಗಿ ಕೇಂದ್ರಾಡಳಿತ ಪ್ರದೇಶವಾಗುತ್ತದೆ ಎಂಬ ಮಾಹಿತಿ ನನಗೆ ಲಭಿಸಿದೆ. 70 ಶೇಕಡಕ್ಕೂ ಅಧಿಕ ಬೌದ್ಧ ಜನಸಂಖ್ಯೆಯಿರುವ ಅದು ಬೌದ್ಧ ಬಹುಸಂಖ್ಯಾತರ ಪ್ರಥಮ ಭಾರತೀಯ ರಾಜ್ಯವಾಗುತ್ತದೆ’’ ಎಂದು ಟ್ವಿಟರ್‌ನಲ್ಲಿ ವಿಕ್ರಮೆಸಿಂಘೆ ಹೇಳಿದ್ದಾರೆ.

ಲಡಾಖನ್ನು ಕೇಂದ್ರಾಡಳಿತ ಪ್ರದೇಶವಾಗಿಸಿರುವುದು ಹಾಗೂ ಅದರ ಪುನರ್ರಚನೆ ‘‘ಭಾರತದ ಆಂತರಿಕ ವಿಷಯವಾಗಿದೆ’’ ಎಂದು ಶ್ರೀಲಂಕಾ ಪ್ರಧಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News