×
Ad

‘ಬಿಳಿಯರು ಶ್ರೇಷ್ಠರು’ ಸಿದ್ಧಾಂತವನ್ನು ಖಂಡಿಸಿದ ಟ್ರಂಪ್

Update: 2019-08-06 21:41 IST

ವಾಶಿಂಗ್ಟನ್, ಆ. 6: ‘ಬಿಳಿಯರು ಶ್ರೇಷ್ಠರು’ ಸಿದ್ಧಾಂತ ಮತ್ತು ಜನಾಂಗೀಯ ತಾರತಮ್ಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಹಿಂಸಾತ್ಮಕ ವೀಡಿಯೊ ಗೇಮ್ಸ್‌ಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಇತ್ತೀಚಿಗೆ ನಡೆದ ಎರಡು ಗುಂಡು ಹಾರಾಟ ಪ್ರಕರಣಗಳ ಬಗ್ಗೆ ಸಾರ್ವಜನಿಕವಾಗಿ ಮೊದಲ ಬಾರಿಗೆ ಸೋಮವಾರ ಮಾತನಾಡಿದ ಅವರು ಸುರಕ್ಷತೆಗೆ ಬೆದರಿಕೆ ಎಂಬುದಾಗಿ ಭಾವಿಸಲಾದ ಜನರಿಗೆ ಶಸ್ತ್ರಾಸ್ತ್ರಗಳನ್ನು ನಿರಾಕರಿಸಗಬೇಕು ಎಂದೂ ಹೇಳಿದ್ದಾರೆ.

ಆದರೆ, ಗಂಟೆಗಳ ಮೊದಲು ತಾನೇ ಮಾತನಾಡಿರುವ ಬಂದೂಕು ನಿಯಂತ್ರಣ ಕ್ರಮಗಳ ಬಗ್ಗೆ ಯಾವುದೇ ಮಾತುಗಳನ್ನು ಆಡಲಿಲ್ಲ.

‘‘ನಮ್ಮ ದೇಶವು ಒಂದೇ ಧ್ವನಿಯಲ್ಲಿ ಜನಾಂಗೀಯ ತಾರತಮ್ಯ, ಅಸಹಿಷ್ಣುತೆ ಮತ್ತು ಬಿಳಿಯರು ಶ್ರೇಷ್ಠರು ಸಿದ್ಧಾಂತವನ್ನು ಖಂಡಿಸಬೇಕು’’ ಎಂದು ಶ್ವೇತಭವನದಿಂದ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News